ಹೆಚ್ಚು ಮೊಬೈಲ್ ಬಳಕೆ ಮಾಡುತ್ತಿದ್ದೀರಾ? ಹಾಗಾದ್ರೆ ಇದನ್ನು ಓದಿ
ಶನಿವಾರ, 22 ಜೂನ್ 2019 (10:05 IST)
ವಾಷಿಂಗ್ಟನ್ : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮೊಬೈಲ್ ನಲ್ಲೇ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಅಂತವರಿಗೆ ಅಧ್ಯಯನವೊಂದು ಶಾಕಿಂಗ್ ನ್ಯೂಸ್ ನೀಡಿದೆ.
ಹೌದು. ಆಸ್ಟ್ರೇಲಿಯಾದ ಕ್ವೀನ್ ಲ್ಯಾಂಡ್ ನ ಸನ್ ಶೈನ್ ಕೋಸ್ಟ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುವ ಯುವ ಪೀಳಿಗೆಯವರ ತಲೆ ಬುರುಡೆಯ ಹಿಂಭಾಗದಲ್ಲಿ ಕೋಡಿನ ಮಾದರಿಯ ಅಂಗವೊಂದು ಬೆಳೆಯುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಅಧ್ಯಯನದ ಪ್ರಕಾರ, ಸಾಮಾನ್ಯವಾಗಿ ಜನರು ಮೊಬೈಲ್ ನೋಡುವಾಗ ಕತ್ತನ್ನು ಕೆಳಮುಖ ಮಾಡಿಕೊಂಡು ನೋಡುತ್ತಾರೆ. ಇದರಿಂದ ಬೆನ್ನು ಮೂಳೆಯ ಬದಲಾಗಿ ತಲೆ ಹಿಂಭಾಗದಲ್ಲಿರುವ ಮೂಳೆಯ ಮೇಲೆ ಹೆಚ್ಚಿನ ಭಾರ ಬೀಳುತ್ತದೆ. ಇದರಿಂದ ತಲೆಬುರುಡೆಯ ಹಿಂಭಾಗದಲ್ಲಿ ಕೊಂಬಿನ ಆಕಾರದಲ್ಲಿ ನಿಧಾನವಾಗಿ ಮೂಳೆ ಬೆಳೆಯುತ್ತದೆ ಎಂದು ತಿಳಿಸಿದೆ.