ಕುಟುಂಬವೊಂದು ಗ್ರೂಪ್‌ ಫೋಟೋ ತೆಗೆಯುವಾಗ ಅಲ್ಲಿಗೆ ಬಂದ ಕೋತಿ ಮಾಡಿದ್ದೇನು ಗೊತ್ತಾ?

ಭಾನುವಾರ, 16 ಜೂನ್ 2019 (08:46 IST)
ಆಸ್ಟ್ರೇಲಿಯಾ : ಸೆಲ್ಫಿ ಹುಚ್ಚು ಬರೀ ಮನುಷ್ಯರಿಗೆ ಮಾತ್ರವಿರುತ್ತದೆ ಎಂದಕೊಂಡರೆ ಇದೀಗ ಪ್ರಾಣಿಗಳಿಗೂ ಸೆಲ್ಫಿ ಹುಚ್ಚು ಹಿಡಿದಿದೆ ಎಂಬ ವಿಚಾರ ಆಸ್ಟ್ರೇಲಿಯಾದಲ್ಲಿ ಕೋತಿಯೊಂದರಿಂದ ಬಹಿರಂಗವಾಗಿದೆ.
ಹೌದು. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಕುಟುಂಬವೊಂದು ಗ್ರೂಪ್‌ ಫೋಟೋ ತೆಗೆಯುವ ವೇಳೆ ಕೋತಿಯೊಂದು ಬಂದು ಕ್ಯಾಮೆರಾ ಕಿತ್ತುಕೊಂಡು ಮಧ್ಯ ಬೆರಳು ತೋರಿಸಿ ಸೆಲ್ಫಿ ಕ್ಲಿಕ್ಕಿಸಿದೆ. ಇದು ಅಲ್ಲಿದ್ದವರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.
ಕಳೆದ ಡಿಸೆಂಬರ್‌ ನಲ್ಲಿ ಈ ಘಟನೆ ನಡೆದಿದ್ದು, ಇತ್ತೀಚಿಗೆ ಅವರು ತಮ್ಮ ಪ್ರವಾಸದ ಫೋಟೋ ನೋಡುತ್ತಿರುವಾಗ ಕೋತಿ ಮಧ್ಯ ಬೆರಳು ತೋರಿಸಿ ಕ್ಲಿಕ್ಕಿಸಿರುವ ಫೋಟೋ ಕಣ್ಣಿಗೆ ಬಿದ್ದದೆಯಂತೆ. ಅದನ್ನು ಅವರು ಇದೀಗ ಸಾಮಾಜಿಕ ಜಾಲತಾಗಳಲ್ಲಿ ಹರಿಬಿಟ್ಟಿದ್ದು,  ಇದು ಈಗ ವೈರಲ್ ಆಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ