ವೀರ್ಯದಾನ ಮಾಡಿದ ವ್ಯಕ್ತಿ ಮಗುವಿನ ನಿಜವಾದ ತಂದೆ ಎಂದ ಆಸ್ಟ್ರೇಲಿಯಾದ ಹೈಕೋರ್ಟ್
ಶುಕ್ರವಾರ, 21 ಜೂನ್ 2019 (06:55 IST)
ಆಸ್ಟ್ರೇಲಿಯಾ : ಒಂದು ಮಗು ಜನ್ಮ ತಾಳವು ಅದಕ್ಕೆ ಯಾರು ವೀರ್ಯದಾನ ಮಾಡುತ್ತಾನೋ ಕಾನೂನಿನ ಪ್ರಕಾರ ಆ ವ್ಯಕ್ತಿ ಆ ಮಗುವಿನ ತಂದೆ ಎನಿಸಿಕೊಳ್ಳುತ್ತಾನೆ ಎಂದು ಆಸ್ಟ್ರೇಲಿಯಾದ ಹೈಕೋರ್ಟ್ ಬುಧವಾರ ತೀರ್ಪು ನೀಡಿದೆ.
ದಶಕದ ಹಿಂದೆ ಸಲಿಂಗಕಾಮಿ ರಾಬರ್ಟ್ ಎಂಬಾತ ತನ್ನ ಸ್ನೇಹಿತನ ಪತ್ನಿಗೆ ಮಗು ಪಡೆಯಲು ವೀರ್ಯ ದಾನ ಮಾಡಿದ್ದ. ಇದರಿಂದ ಮಗು ಜನಿಸಿದ್ದು, ರಾಬರ್ಟ್ ಆ ಮಗುವಿನ ಜೊತೆ ಅತ್ಯಂತ ನಿಕಟವಾದ ಸಂಬಂಧವನ್ನು ಹೊಂದಿದ್ದ.. ಆದರೆ 2015ರಲ್ಲಿ ಈ ದಂಪತಿ ನ್ಯೂಜಿಲೆಂಡ್ ನಲ್ಲಿ ವಾಸಿಸಲು ನಿರ್ಧಾರ ಮಾಡಿದಾಗ ರಾಬರ್ಟ್ ಇದಕ್ಕೆ ವಿರೋಧ ವ್ಯಕ್ತಪಡಿಸಿ ಕೋರ್ಟ್ ಮೇಟ್ಟಿಲೇರಿದ್ದ.
ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್, ವೀರ್ಯದಾನ ಮಾಡಿದ ರಾಬರ್ಟ್ ಮಗುವಿನ ಕಾನೂನುಬದ್ಧ ತಂದೆ. ಆದ್ದರಿಂದ ಮಗುವನ್ನು ನ್ಯೂಜಿಲೆಂಡ್ ಗೆ ಕರೆದೊಯ್ಯುವ ಮೊದಲು ರಾಬರ್ಟ್ನ ಅಭಿಪ್ರಾಯವನ್ನೂ ಕೇಳಬೇಕು ಎಂದು ತೀರ್ಪು ನೀಡಿದೆ.