ಸೌದಿ ಅರೇಬಿಯಾದ ರಾಜನ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಕರ್ನಾಟಕದ ಯುವಕ ಅರೆಸ್ಟ್

ಬುಧವಾರ, 25 ಡಿಸೆಂಬರ್ 2019 (06:28 IST)
ಸೌದಿ ಅರೇಬಿಯಾ : ಸೌದಿ ಅರೇಬಿಯಾದ ರಾಜನ ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಕ್ಕೆ ಕರ್ನಾಟಕ ಮೂಲದ ಯುವಕನನ್ನು ಸೌದಿ ಪೊಲೀಸರು ಬಂಧಿಸಿದ್ದಾರೆ.



ಉಡುಪಿ ಜಿಲ್ಲೆಯ ಕೋಟೇಶ್ವರದ ಯುವಕ ಹರೀಶ್ ಬಂಗೇರ ಬಂಧಿತ ಆರೋಪಿ. ಈತ ತನ್ನ ಫೇಸ್ ಬುಕ್ ನಲ್ಲಿ ಮಂಗಳೂರಿನಲ್ಲಿ ನಡೆದ ಗೋಲಿಬಾರ್  ಬಗ್ಗೆ ಪೋಸ್ಟ್ ಮಾಡಿದ್ದಾನೆ. ಇದಕ್ಕೆ ಅಲ್ಲಿನ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಹರೀಶ್ ಕ್ಷಮೆಕೋರಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.


ಆದರೆ ಯಾರೋ ಕಿಡಿಗೇಡಿಗಳು ಹರೀ‍ಶ್ ಬಂಗೇರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಮೆಕ್ಕಾ, ಮದೀನ, ಸೌದಿ ರಾಜನ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ. ಆದಕಾರಣ ಈ ಆರೋಪದ ಮೇಲೆ ಸೌದಿ ಪೊಲೀಸರು ಹರೀಶ್ ಬಂಗೇರ ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ