ಇಮ್ರಾನ್ ಖಾನ್ ವಿರುದ್ಧ ಅರೆಸ್ಟ್ ವಾರೆಂಟ್

ಸೋಮವಾರ, 3 ಅಕ್ಟೋಬರ್ 2022 (09:16 IST)
ಇಸ್ಲಾಮಾಬಾದ್ : ಮಹಿಳಾ ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಇಸ್ಲಾಮಾಬಾದ್ನ ಮ್ಯಾಜಿಸ್ಟ್ರೇಟ್ ಬಂಧನ ವಾರಂಟ್ ಹೊರಡಿಸಿದ್ದಾರೆ.

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಝೆಬಾ ಚೌಧರಿ ಅವರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಇಮ್ರಾನ್ ಖಾನ್ ವಿರುದ್ಧ ಆಗಸ್ಟ್ 20 ರಂದು ದಾಖಲಾದ ಪ್ರಕರಣದಲ್ಲಿ ಇಸ್ಲಾಮಾಬಾದ್ನ ಮರ್ಗಲ್ಲಾ ಪೊಲೀಸ್ ಠಾಣೆಯ ಮ್ಯಾಜಿಸ್ಟ್ರೇಟ್ ವಾರಂಟ್ ಹೊರಡಿಸಿದ್ದಾರೆ.

ಇಮ್ರಾನ್ ಖಾನ್ ಅಫಿಡವಿಟ್ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಈ ಬಂಧನ ವಾರಂಟ್ ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ