ಇನ್ಮುಂದೆ ಸೂಕ್ತ ಒಳಉಡುಪು ಧರಿಸಲೇಬೇಕು : ಪಾಕ್

ಶನಿವಾರ, 1 ಅಕ್ಟೋಬರ್ 2022 (07:02 IST)
ಇಸ್ಲಾಮಾಬಾದ್ : ಇನ್ಮುಂದೆ ವಿಮಾನದ ಕ್ಯಾಬಿನ್ ಸಿಬ್ಬಂದಿ ಸೂಕ್ತವಾದ ಒಳಉಡುಪುಗಳನ್ನು ಧರಿಸಲೇಬೇಕು ಎಂದು ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಯು ಆದೇಶಿಸಿದೆ.

ಈ ಆದೇಶವು ವಿಚಿತ್ರ ಹಾಗೂ ವಿಲಕ್ಷಣ ಎಂದೇ ಅನ್ನಿಸಬಹುದು. ಆದರೆ ಕ್ಯಾಬಿನ್ ಸಿಬ್ಬಂದಿಗೆ ಡ್ರೆಸ್ಸಿಂಗ್ ಸೆನ್ಸ್ ತುಂಬಾನೇ ಮುಖ್ಯ. ಇಲ್ಲವಾದಲ್ಲಿ ಸಂಸ್ಥೆಯ ಬಗ್ಗೆ ಪ್ರಯಾಣಿಕರು ನಕಾರಾತ್ಮಕ ಧೋರಣೆ ತಾಳುತ್ತಾರೆ ಎಂದು ಆದೇಶ ಪ್ರತಿಯಲ್ಲಿ ತಿಳಿಸಿದೆ.

ಈ ಹೊಸ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತನ್ನ ವಿಮಾನ ಸಿಬ್ಬಂದಿಗೆ ಕೇಳಿಕೊಂಡಿದೆ. ಕೆಲ ಕ್ಯಾಬಿನ್ ಸಿಬ್ಬಂದಿ ಇಂಟರ್ಸಿಟಿ ಪ್ರಯಾಣ ಮಾಡುವಾಗ, ಹೋಟೆಲ್ಗಳಲ್ಲಿ ಉಳಿದುಕೊಳ್ಳುವಾಗ ಮತ್ತು ವಿವಿಧ ಭೇಟಿಗಳ ಸಂದರ್ಭದಲ್ಲಿ ತಮ್ಮಿಚ್ಛೆಯಂತೆ ಉಡುಗೆ ಧರಿಸುತ್ತಾರೆ.

ಇಂತಹ ಡ್ರೆಸ್ಸಿಂಗ್ ಸೆನ್ಸ್ ನೋಡುಗರಲ್ಲಿ ಮುಜುಗರ ಉಂಟುಮಾಡುತ್ತದೆ. ಅಷ್ಟೇ ಅಲ್ಲ, ಸಂಸ್ಥೆಯ ಬಗ್ಗೆ ಪ್ರಯಾಣಿಕರಲ್ಲಿ ತಪ್ಪು ಗ್ರಹಿಕೆಗೆ ಈಡುಮಾಡುತ್ತದೆ. ಆದ್ದರಿಂದ ಪುರುಷರೇ ಆಗಲಿ ಮಹಿಳೆಯರೇ ಆಗಲಿ ಸೂಕ್ತ ಒಳಉಡುಪು ಮತ್ತು ಸರಳವಾದ ಉಡುಪುಗಳನ್ನು ಧರಿಸಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ