ಅಪ್ರಾಪ್ತ ಬಾಲಕನ ಬಳಿ ಆಗಾಗ ಬರುತ್ತಿದ್ದ ಆಂಟಿ ಮಾಡುತ್ತಿದ್ದಳಂತೆ ಈ ಕೆಲಸ

ಶುಕ್ರವಾರ, 7 ಫೆಬ್ರವರಿ 2020 (06:45 IST)
ಹಿಮಾಚಲ ಪ್ರದೇಶ : 25 ವರ್ಷದ ಎರಡು ಮಕ್ಕಳ ತಾಯಿಯೊಬ್ಬಳು 17 ವರ್ಷದ  ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಹಿಮಾಚಲ ಪ್ರದೇಶದ ಬಿಲಾಸ್ಪುರ ಜಿಲ್ಲೆಯಲ್ಲಿ ನಡೆದಿದೆ.

ವಿದ್ಯಾಭ್ಯಾಸಕ್ಕೆಂದು ತಂದೆತಾಯಿಯನ್ನು ಬಿಟ್ಟು ದೂರದಲ್ಲಿ ಒಂಟಿಯಾಗಿದ್ದ ಬಾಲಕನ ಬಳಿ ಆಗಾಗ ಬರುತ್ತಿದ್ದ ಮಹಿಳೆ ಆತನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಳಂತೆ. ಅಲ್ಲದೇ ಮನೆಬಿಟ್ಟು ತನ್ನ ಬಳಿ ಬರುವಂತೆ ಒತ್ತಾಯಮಾಡುತ್ತಿದ್ದಳಂತೆ . ಇದರಿಂದ ಆತನ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತಿದ್ದ ಕಾರಣ ಬೇಸತ್ತ ಬಾಲಕ ಈ ವಿಚಾರವನ್ನು ತನ್ನ ತಂದೆಗೆ ತಿಳಿಸಿದ್ದಾನೆ.

 

ಈ ಬಗ್ಗೆ ತಂದೆ ಮಹಿಳೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರುಮಾಡಿದ್ದಾರೆ ಎನ್ನಲಾಗಿದೆ.  

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ