ಪಾಕಿಸ್ತಾನದ ಷಡ್ಯಂತ್ರದ ರಹಸ್ಯ ಬಾಯ್ಬಿಟ್ಟ ಬಲೂಚಿಸ್ತಾನ್ ನಾಯಕ!

ಶುಕ್ರವಾರ, 19 ಜನವರಿ 2018 (08:54 IST)
ಇಸ್ಲಾಮಾಬಾದ್: ಕುಲಭೂಷಣ್ ಜಾದವ್ ಭಾರತದ ಪರ ಬೇಹುಗಾರಿಕೆ ಮಾಡಿದ್ದ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಇದುವರೆಗೆ ಹೇಳುತ್ತಿದ್ದ ಪಾಕಿಸ್ತಾನಕ್ಕೆ ಮುಖಭಂಗವಾಗುವಂತೆ ಬಲೂಚಿಸ್ತಾನ್ ಮಾಮಾ ಖದೀರ್ ಹೇಳಿಕೆ ನೀಡಿದ್ದಾರೆ.
 

ಕುಲಭೂಷಣ್ ಜಾದವ್ ರನ್ನು ಕೋಟಿಗಟ್ಟಲೆ ಖರ್ಚು ಮಾಡಿ ಪಾಕ್ ಗುಪ್ತಚರ ಇಲಾಖೆ ಇರಾನ್ ನಿಂದ ಅಪಹರಿಸಿತ್ತು. ಈ ಕೃತ್ಯ ನಡೆಸಿದ್ದು ಉಗ್ರ ಮುಲ್ಲಾ ಉಮರ್ ಬಲೂಚ್ ಇರಾನಿ ಎಂದು ಖದೀರ್ ಬಾಂಬ್ ಸಿಡಿಸಿದ್ದಾರೆ.

ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಮಾಜಿ ನೌಕಾ ಪಡೆ ಅಧಿಕಾರಿ ಕುಲಭೂಷಣ್ ಜಾದವ್ ರನ್ನು ಬಂಧಿಸಿದ ಪಾಕ್, ಜಾದವ್ ಗೆ ಗಲ್ಲು ಶಿಕ್ಷೆ ತೀರ್ಪು ನೀಡಿದೆ. ಆದರೆ ಅಂತಾರಾಷ್ಟ್ರೀಯ ಕೋರ್ಟ್ ಮಧ್ಯಪ್ರವೇಶದಿಂದಾಗಿ  ಅದು ಸದ್ಯದ ಮಟ್ಟಿಗೆ ತಡೆಯಾಗಿದೆ. ಐಎಸ್ಐ ಉಗ್ರ ಮುಲ್ಲಾಗೆ ಜಾದವ್ ರನ್ನು ಅಪಹರಿಸಲು ಕೋಟಿಗಟ್ಟಲೆ ಹಣ ನೀಡಿತ್ತು. ಇರಾನ್ ನ ಬಂದರು ನಗರಿ ಚಬ್ ಹರ್ ನಿಂದ ಜಾದವ್ ರನ್ನು ಅಪಹರಿಸಲಾಗಿತ್ತು ಎಂದು ನಮ್ಮ ನಿಕಟ ಮೂಲಗಳು ಮಾಹಿತಿ ನೀಡಿವೆ ಎಂದು ಖದೀರ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ