ನರಿ ಬುದ್ಧಿ ತೋರಿಸಿದ ಪಾಕ್ ಮೇಲೆ ಹುಲಿಯಂತೆ ಎರಗಿದ ಭಾರತೀಯ ಸೇನೆ ಮಾಡಿದ್ದೇನು ಗೊತ್ತಾ?!
ಶನಿವಾರ ಪಾಕ್ ಪಡೆಗಳು ಭಾರತೀಯ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದರಿಂದ ಓರ್ವ ಯೋಧ ಹುತಾತ್ಮನಾಗಿದ್ದ. ಪಾಕ್ ದಾಳಿಗೆ ಎಚ್ಚೆತ್ತ ಭಾರತೀಯ ಸೈನಿಕರು ಕೂಡಲೇ ಪ್ರತಿದಾಳಿ ನಡೆಸಿದ್ದರು. ಇದೀಗ ಭಾರತೀಯ ಸೇನೆ ಸರಿಯಾಗಿಯೇ ಸೇಡು ತೀರಿಸಿಕೊಂಡಿದೆ.
ಆದರೆ ಪಾಕ್ ಮಾತ್ರ ಎಂದಿನ ವರಸೆ ತೋರಿದ್ದು, ದಾಳಿಯಲ್ಲಿ ನಮ್ಮ ನಾಲ್ವರು ಯೋಧರು ಮಾತ್ರ ತೀರಿಕೊಂಡಿದ್ದಾರೆ. ಭಾರತೀಯ ಸೈನಿಕರನ್ನೂ ನಾವು ಹೊಡೆದುರುಳಿಸಿದ್ದೇವೆ ಎನ್ನುತ್ತಿದೆ.