ನವದೆಹಲಿ: ಚೀನಾ ವಿರುದ್ಧ ಸಮರ ಸಾರಿರುವ ಭಾರತ ಸರ್ಕಾರ ಚೀನಾ ಮೂಲದ 59 ಆಪ್ ಗಳಿಗೆ ನಿಷೇಧ ಹೇರಿದ ಬೆನ್ನಲ್ಲೇ ನೆಟ್ಟಿಗರು ಚೀನಾ ಮೊಬೈಲ್ ಗಳಿಗೂ ನಿಷೇಧ ಹೇರಿ ಎಂದು ಒತ್ತಾಯಿಸಿದ್ದಾರೆ.
ಭಾರತ ಚೀನಾ ಮೊಬೈಲ್ ಗಳಿಗೆ ಬಹುದೊಡ್ಡ ಮಾರುಕಟ್ಟೆಯಾಗಿದೆ. ಇಲ್ಲಿನ ಯಾವುದೇ ಶೋ ರೂಂಗಳಿಗೆ ಹೋದರೂ ಚೀನಾ ಮೊಬೈಲ್ ಗಳದ್ದೇ ಮೇಲುಗೈ. ಒಂದು ವೇಳೆ ಚೀನಾ ಕಂಪನಿಗಳ ಮೊಬೈಲ್ ನಿಷೇಧ ಹೇರಿದರೆ ಅಕ್ಷರಶಃ ಚೀನಾಗೆ ದೊಡ್ಡ ಹೊಡೆತ ನೀಡಬಹುದು. ಹೀಗಾಗಿ ಚೀನಾ ಮೊಬೈಲ್ ಗಳನ್ನೂ ನಿಷೇಧಿಸಿ ಎಂದು ಕೆಲವರು ಸಾಮಾಜಿಕ ಜಾಲತಾಣದ ಮೂಲಕ ಒತ್ತಾಯಿಸಿದ್ದಾರೆ.