ಉತ್ತರ ಕೊರಿಯಾದಲ್ಲಿ ನಗೋದು ಕೂಡ ಬ್ಯಾನ್!?
ಉತ್ತರ ಕೊರಿಯಾದ ಮಾಜಿ ನಾಯಕ ಕಿಮ್ ಜಾಂಗ್ ಇಲ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರಸ್ತುತ ಆಳ್ವಿಕೆ ನಡೆಸುತ್ತಿರುವ ಕಿಮ್ ಜಾಂಗ್ ಉನ್ ಸರ್ಕಾರವು 11 ದಿನಗಳ ಶೋಕಾಚರಣೆಗೆ ಆದೇಶ ನೀಡಿದೆ.
ಕಿಮ್ ಜಾಂಗ್ ಇಲ್ 1994 ರಿಂದ 2011ರ ಡಿಸೆಂಬರ್ 17ರವೆಗೆ ಆಳ್ವಿಕೆ ನಡೆಸಿದ್ದರು. ನಂತರ ಅವರ ಪುತ್ರ ಕಿಮ್ ಜಾಂಗ್ ಉನ್ ಆಳ್ವಿಕೆ ಮುಂದುವರೆಸುತ್ತಿದ್ದು, ತಮ್ಮ ತಂದೆಗೆ ಸ್ಮರಣಾರ್ಥ 11 ದಿನಗಳವರೆಗೆ ಯಾವುದೇ ಸಂತೋಷದ ಲಕ್ಷಣಗಳನ್ನು ವ್ಯಕ್ತಪಡಿಸದಂತೆ ಸಾರ್ವಜನಿಕರಿಗೆ ಆದೇಶ ನೀಡಿದೆ ಎಂದು ಡೈಲಿ ಮೈಲ್ ವರದಿ ಮಾಡಿದೆ.
ಈ ರಾಷ್ಟ್ರೀಯ ಶೋಕಾಚರಣೆಯ ಸಂದರ್ಭದಲ್ಲಿ ಉತ್ತರ ಕೊರಿಯಾದ ಪ್ರಜೆಗಳು ಮದ್ಯಪಾನ ಮಾಡುವುದಕ್ಕೆ ಅವಕಾಶವಿಲ್ಲ. ತುಸು ನಗುವುದಕ್ಕೂ ಅವಕಾಶ ನೀಡಲಾಗಿಲ್ಲ. ಹಾಗೆಯೇ ನಾಗರಿಕರು ವಿನೋದದ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದು ಖಡಕ್ ಆದೇಶ ನೀಡಲಾಗಿದೆ.