ಇಂಡೋನೇಷ್ಯಾದ ಈ ಸ್ಥಳದಲ್ಲಿ ಪ್ರೇಮಿಗಳು ತಬ್ಬಿಕೊಳ್ಳುವ ಮುನ್ನ ಎಚ್ಚರ
ಶನಿವಾರ, 2 ಫೆಬ್ರವರಿ 2019 (09:16 IST)
ಇಂಡೋನೇಷ್ಯಾ : ಇಂಡೋನೇಷ್ಯಾದ ಏಸೆ ಪ್ರಾಂತ್ಯದ ಸಾರ್ವಜನಿಕ ಸ್ಥಳದಲ್ಲಿ ಯುವ ಪ್ರೇಮಿಗಳಿಬ್ಬರು ತಬ್ಬಿಕೊಂಡಿದ್ದಕ್ಕೆ ಅವರಿಗೆ ಆದ ಗತಿ ಏನೆಂದು ಕೇಳಿದರೆ ಶಾಕ್ ಆಗ್ತೀರಾ.
ಹೌದು. ಏಸೆ ಪ್ರಾಂತ್ಯದಲ್ಲಿ ಹೆಚ್ಚಿನ ಜನರು ಇಸ್ಲಾಂ ಧರ್ಮವನ್ನು ಪಾಲಿಸುತ್ತಿರುವುದರಿಂದ ಅಲ್ಲಿನ ಸರ್ಕಾರ ಹಾಗೂ ಧಾರ್ಮಿಕ ಮುಖಂಡರು ಮಾಡಿರುವ ಕಾನೂನನ್ನು ಎಲ್ಲರೂ ಚಾಚು ತಪ್ಪದೇ ಪಾಲಿಸುತ್ತಾರೆ. ಅಷ್ಟೇ ಅಲ್ಲದೆ ಅಲ್ಲಿ ಕಾನೂನನ್ನು ಉಲ್ಲಂಘಿಸಿದರೆ ಷರಿಯಾ ಕಾನೂನಿನ ಪ್ರಕಾರ ಕಠಿಣ ಹಾಗೂ ಕ್ರೂರ ಶಿಕ್ಷೆಯನ್ನು ನೀಡಲಾಗುತ್ತದೆ.
ಆದರೆ ಏಸೆ ಪ್ರಾಂತ್ಯದ ಮಹಿಳಾ ವಿಶ್ವವಿದ್ಯಾನಿಲಯದ 18 ವರ್ಷದ ವಿದ್ಯಾರ್ಥಿನಿ ಹಾಗೂ ಯುವಕನೊಬ್ಬನು ಸಾರ್ವಜನಿಕ ಸ್ಥಳದಲ್ಲಿ ತಬ್ಬಿಕೊಂಡಿದ್ದರು. ಆದರಿಂದ ಪ್ರೇಮಿಗಳು ಏಸೆ ಪ್ರಾಂತ್ಯದ ಕಾನೂನನ್ನು ಉಲ್ಲಂಘಸಿದ್ದಾರೆ ಎಂದು ಧಾರ್ಮಿಕ ಮುಖಂಡರು ಅವರಿಬ್ಬರನ್ನು ಮಸೀದಿಯ ಮುಂದೆ ಕೂರಿಸಿ ಸಾರ್ವಜನಿಕರ ಎದುರೇ 17 ಬಾರಿ ಬಿದಿರಿನ ಕೋಲಿನಿಂದ ಹೊಡೆದಿದ್ದಾರೆ. ಅಷ್ಟೇ ಅಲ್ಲದೇ ಕಾನೂನನ್ನು ಉಲ್ಲಂಘಿಸಿದಕ್ಕೆ ಇಬ್ಬರಿಗೂ 1 ತಿಂಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಲು ಆದೇಶ ಹೊರಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.