ನುಡಿದಂತೆ ದೀಪಾವಳಿಗೆ ಗಿಫ್ಟ್ ಕೊಡಲಿರುವ ಪ್ರಧಾನಿ ಮೋದಿ: ಈ ವಸ್ತುಗಳೆಲ್ಲಾ ಅಗ್ಗ

Krishnaveni K

ಶುಕ್ರವಾರ, 22 ಆಗಸ್ಟ್ 2025 (10:01 IST)
ನವದೆಹಲಿ: ಮೊನ್ನೆಯಷ್ಟೇ ದೆಹಲಿಯ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ ನಿಮಿತ್ತ ಧ್ವಜಾರೋಹಣ ಮಾಡಿದ್ದ ಪ್ರಧಾನಿ ಮೋದಿ ದೀಪಾವಳಿಗೆ ದೇಶದ ಜನತೆಗೆ ಗಿಫ್ಟ್ ಕೊಡುವುದಾಗಿ ಹೇಳಿದ್ದರು. ಇದೀಗ ನುಡಿದಂತೆ ಜಿಎಸ್ ಟಿ ಕಡಿತಗೊಳಿಸಿ ಗಿಫ್ಟ್ ಕೊಡಲು ಮುಂದಾಗಿದ್ದು ಈ ಎಲ್ಲಾ ವಸ್ತುಗಳ ಬೆಲೆ ಕಡಿತವಾಗಲಿದೆ.

ಈಗ ಅಸ್ತಿತ್ವದಲ್ಲಿರುವ ನಾಲ್ಕು ಜಿಎಸ್ ಟಿ ಸ್ಲ್ಯಾಬ್ ಗಳನ್ನು ಕಿತ್ತು ಹಾಕಿ ಎರಡು ಸ್ಲ್ಯಾಬ್ ಜಾರಿಯಲ್ಲಿಡುವಂತೆ ಜಿಎಸ್ ಟಿ ಕೌನ್ಸಿಲ್ ಗೆ ಕೇಂದ್ರ ಸರ್ಕಾರ ಪ್ರಸ್ತಾವನೆಯಿಟ್ಟಿದೆ. ನಿನ್ನೆ ಇದಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದುವರೆಗೆ ಶೇ. 5, 12, 18 ಮತ್ತು 28 ರ ಸ್ಲ್ಯಾಬ್ ಜಾರಿಯಲ್ಲಿತ್ತು.

ಆದರೆ ಇನ್ನು ಶೇ. 5 ಮತ್ತು 18 ರ ಸ್ಲ್ಯಾಬ್ ಮಾತ್ರ ಜಾರಿಯಲ್ಲಿರಲಿದೆ. ಇದರಿಂದ ರೈತರು, ಮಧ್ಯಮ ವರ್ಗದವರು, ಸಣ್ಣ ಉದ್ದಿಮೆದಾರರಿಗೆ ಸಾಕಷ್ಟು ಲಾಭವಾಗಲಿದೆ. ಕೆಲವು ವಸ್ತುಗಳ ಬೆಲೆ ತಾನಾಗಿಯೇ ಕಡಿಮೆಯಾಗಲಿದೆ.

ಯಾವೆಲ್ಲಾ ವಸ್ತುಗಳ ಅಗ್ಗ?
ಬ್ರ್ಯಾಂಡೆಡ್ ವಸ್ತುಗಳು, ಖಾದ್ಯ ತೈಲಗಳು, ಪ್ಯಾಕ್ ಮಾಡಿದ ಜ್ಯೂಸ್ ಗಳು ಅಗ್ಗವಾಗಲಿವೆ. ಇವುಗಳ ಬೆಲೆ 7 ರಿಂದ 50 ರೂ.ವರೆಗೆ ಅಗ್ಗವಾಗಲಿದೆ. ಇದುವರೆಗೆ ಇವೆಲ್ಲವೂ ಶೇ.12 ಸ್ಲ್ಯಾಬ್ ನಲ್ಲಿದ್ದವು. ಆದರೆ ಇನ್ನು ಶೇ.5 ರ ಸ್ಲ್ಯಾಬ್ ವರ್ಗಾವಣೆಯಾಗಲಿದೆ. ಹೀಗಾಗಿ ದರ ಕಡಿಮೆಯಾಗಲಿದೆ. ಒಟ್ಟು 90 ಕ್ಕೂ ಹೆಚ್ಚು ವಸ್ತುಗಳ ಬೆಲೆ ಅಗ್ಗವಾಗುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ