ದಿನಕ್ಕೆ ಎಷ್ಟು ಕಪ್ ಕಾಫಿ ಕುಡಿಯಬಹುದು: ಡಾ ಸಿಎನ್ ಮಂಜುನಾಥ್ ಸಲಹೆ ನೋಡಿ

Krishnaveni K

ಶುಕ್ರವಾರ, 22 ಆಗಸ್ಟ್ 2025 (10:26 IST)
ಹೆಚ್ಚಿನವರಿಗೆ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ದಿನಕ್ಕೆ ಎಷ್ಟು ಕಾಫಿ ಸೇವಿಸಬಹುದು, ಇದರಿಂದ ಏನು ಲಾಭ ಎಂದು ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಯೂ ಟ್ಯೂಬ್ ವಾಹಿನಿಯೊಂದರ ಪಾಡ್ ಕಾಸ್ಟ್ ವೇಳೆ ಹೇಳಿದ್ದರು.

ಕಾಫಿ ಕುಡಿಯುವುದು ಅದರಲ್ಲೂ ನಮ್ಮ ಭಾರತೀಯರಲ್ಲಿ ಅದೊಂದು ಜೀವನದ ಭಾಗವೇ ಆಗಿ ಹೋಗಿದೆ. ಕೆಲವರಿಗೆ ಕಾಫಿ ಚಟವಾದರೆ ಮತ್ತೆ ಕೆಲವರಿಗೆ ಅದು ಕೆಲಸ ಮಾಡಲು ಬೂಸ್ಟ್ ಆಗಿರುತ್ತದೆ. ಹಾಗಿದ್ದರೆ ದಿನಕ್ಕೆ ಎಷ್ಟು ಕಾಫಿ ಸೇವನೆ ಮಾಡಬಹುದು?

ಡಾ ಸಿಎನ್ ಮಂಜುನಾಥ್ ಅವರ ಪ್ರಕಾರ ದಿನಕ್ಕೆ ಎರಡು ಕಪ್ ಕಾಫಿ ಸೇವನೆ ಮಾಡಬಹುದು. ಅವರು ಹೇಳುವಂತೆ ಅಮೆರಿಕನ್ ಅಧ್ಯಯನ ವರದಿಯೊಂದರ ಪ್ರಕಾರ ದಿನಕ್ಕೆ ಎರಡು ಕಪ್ ಕಾಫಿ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ.

ಎರಡು ಕಪ್ ವರೆಗೆ ಕಾಫಿ ಕುಡಿಯುವವರಿಗೆ ಹೃದಯ ಖಾಯಿಲೆ ಕಡಿಮೆ ಎಂದು ಅಮೆರಿಕಾ ಅಧ್ಯಯನವೊಂದು ಹೇಳಿದೆ. ಅದು ತಡೆಗಟ್ಟುತ್ತದೆ ಎಂದಲ್ಲ ಆದರೆ ಕಡಿಮೆ ಮಾಡುತ್ತದೆ ಎಂದು ಅಧ್ಯಯನ ವರದಿ ಹೇಳುತ್ತದೆ. ಎರಡು ಕಪ್ ಕಾಫಿ ಸೇವನೆ ಮಾಡುವುದು ಹೃದಯಕ್ಕೆ, ಮೆದುಳಿನ ಆರೋಗ್ಯಕ್ಕೆ, ಡಯಾಬಿಟಿಸ್ ರೋಗಿಗಳಿಗೆ ಉತ್ತಮ ಎಂದು ಆ ವರದಿ ಹೇಳುತ್ತದೆ. ಆದರೆ 2 ಕಪ್ ಗಿಂತ ಹೆಚ್ಚು ಕುಡಿಯಬಾರದು. ಕಾಫಿ ಒಳ್ಳೆಯದು ಎಂದು ಹೆಚ್ಚು ಸೇವನೆ ಮಾಡಿದರೆ ಅದರಿಂದಲೂ ಅಡ್ಡಪರಿಣಾಮವಾಗಬಹುದು ಎಂದು ಡಾ ಸಿಎನ್ ಮಂಜುನಾಥ್ ಹೇಳಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ