ವಾಷಿಂಗ್ಟನ್ : ಅಮೆರಿಕಾ ಅಧ್ಯಕ್ಷ ಜೋ ಬೈಡನ್ ನೇತೃತ್ವದ ಸರ್ಕಾರದಲ್ಲಿ ಇಲ್ಲಿಯವರೆಗೆ 130ಕ್ಕೂ ಅಧಿಕ ಪ್ರಮುಖ ಸ್ಥಾನಗಳಿಗೆ ಇಂಡೋ ಅಮೆರಿಕರನ್ನರನ್ನು ನೇಮಿಸಿದ್ದಾರೆ.
ಈ ಮೂಲಕ ಬೈಡನ್ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಅಮೆರಿಕಾದ ಜನಸಂಖ್ಯೆಯಲ್ಲಿ ಭಾರತೀಯ ಸಮೂದಾಯದ ಪ್ರಮಾಣ ಶೇ.1ರಷ್ಟಿದ್ದು, 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಸಮೂದಾಯಕ್ಕೆ ನೀಡಿದ್ದ ಭರವಸೆಯನ್ನು ಪೂರೈಸಿದ್ದಾರೆ.
ಈ ಮೂಲಕ ಹಿಂದಿನ 2 ಅಧ್ಯಕ್ಷರ ದಾಖಲೆಯನ್ನು ಮುರಿದಿದ್ದಾರೆ. ಈ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇತೃತ್ವದ ಸರ್ಕಾರದಲ್ಲಿ 80ಕ್ಕೂ ಹೆಚ್ಚು ಇಂಡೋ ಅಮೆರಿಕರಿದ್ದರೆ, ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದಾಗ 60ಕ್ಕೂ ಅಧಿಕ ಇಂಡೋ ಅಮೆರಿಕರನ್ನು ನೇಮಿಸಿದ್ದರು.
ಆದರೆ ಈ ಬಾರಿ ಬೈಡನ್ ನೇತೃತ್ವದ ಸರ್ಕಾರದಲ್ಲಿ 130ಕ್ಕೂ ಅಧಿಕ ಇಂಡೋ ಅಮೆರಿಕನ್ನರು ಕೆಲಸ ಮಾಡುತ್ತಿದ್ದಾರೆ.