ಅಮೆರಿಕ ಮತ್ತು ರಷ್ಯಾದ ಮಧ್ಯೆ ಯುದ್ಧವಾದರೆ 5 ಕೋಟಿ ಜನರ ಸಾವು ಸಾಧ್ಯತೆ- ರುಟ್ಗರ್ಸ್ ವಿವಿ ವರದಿ
ಆಧುನಿಕ ಪರಮಾಣು ಯುದ್ಧದಲ್ಲಿ ಜಾಗತಿಕ ಕ್ಷಾಮದ ಪ್ರಭಾವದಿಂದ 5 ಶತಕೋಟಿ ಜನರು ಸಾವನ್ನಪ್ಪುತ್ತಾರೆ ಎಂದು ನ್ಯೂಜೆರ್ಸಿಯ ರುಟ್ಗರ್ಸ್ ವಿವಿಯ ವಿಜ್ಞಾನಿಗಳ ವರದಿ ಹೇಳಿದೆ.
ಮಾರಣಾಂತಿಕ ಸ್ಫೋಟಗಳಿಂದ ಸಂಭವಿಸುವ ಸಾವುನೋವುಗಳನ್ನು ಮೀರಿಸಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ವಿಜ್ಞಾನಿಗಳ ತಂಡ 6 ಸಂಭಾವ್ಯ ಪರಮಾಣು ಸಂಘರ್ಷದ ಸನ್ನಿವೇಶಗಳ ಪರಿಣಾಮವನ್ನು ಗುರುತಿಸಿದೆ. ಅಮೆರಿಕ-ರಶ್ಯ ನಡುವಿನ ಪೂರ್ಣಪ್ರಮಾಣದ ಪರಮಾಣು ಯುದ್ಧವು ಮನುಕುಲದ ಅರ್ಧದಷ್ಟನ್ನು ನಾಶಗೊಳಿಸಬಹುದು ಎಂದು 'ನೇಚರ್ ಫುಡ್' ಪತ್ರಿಕೆಯಲ್ಲಿ ಪ್ರಕಟವಾದ ವರದಿ ಉಲ್ಲೇಖಿಸಿದೆ.ಪರಮಾಣು ಶಸ್ತ್ರಾಸ್ತ್ರಗಳ ಸ್ಫೋಟದಿಂದ ಉರಿಯುವ ಬೆಂಕಿಯಿಂದ ಎಷ್ಟು ಪ್ರಮಾಣದ ಮಸಿ ವಾತಾವರಣಕ್ಕೆ ಸೇರಿಕೊಳ್ಳುತ್ತದೆ ಎಂಬ ಲೆಕ್ಕಾಚಾರದ ಮೇಲೆ ಈ ಅಂದಾಜು ಮಾಡಲಾಗಿದೆ. ಸಣ್ಣ ಪ್ರಮಾಣದ ಸಂಘರ್ಷವೂ ಜಾಗತಿಕ ಆಹಾರ ಉತ್ಪಾದನೆಯ ಮೇಲೆ ವಿನಾಶಕಾರಿ ಪರಿಣಾಮ ಬೀರಬಹುದು.ಭಾರತ ಮತ್ತು ಪಾಕಿಸ್ತಾನದ ನಡುವಿನ ಸ್ಥಳೀಯ ಯುದ್ಧವು 5 ವರ್ಷದೊಳಗೆ ಬೆಳೆ ಇಳುವರಿಯಲ್ಲಿ ಸುಮಾರು 7% ಕುಸಿತಕ್ಕೆ ಕಾರಣವಾಗಬಹುದು. ಆದರೆ ಅಮೆರಿಕ-ರಶ್ಯ ಯುದ್ಧವು 3ರಿಂದ 4 ವರ್ಷದಲ್ಲೇ ಆಹಾರ ಉತ್ಪಾದನೆಯಲ್ಲಿ 90%ದಷ್ಟು ಕುಸಿತಕ್ಕೆ ಕಾರಣವಾಗಬಹುದು ಎಂದು ನ್ಯೂಜೆರ್ಸಿಯ ರುಟ್ಗರ್ಸ್ ವಿವಿಯ ವಿಜ್ಞಾನಿಗಳ ವರದಿ ಹೇಳಿದೆ.