ಲಂಡನ್ : ಕೊಲ್ ಚೆಸ್ಟರ್ ಎಂಬ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನು ಎಪ್ಪತ್ತು ಸಾವಿರ ಪೌಂಡ್ ಗೆ ಹರಾಜಿಗಿಟ್ಟ ಘಟನೆ ನಡೆದಿದೆ.
ಡೇಲ್ ಲೀಕ್ಸ್ ಎಂಬಾತ ತನ್ನ ಪ್ರೇಯಸಿ ಕೆಲ್ಲಿ ಗ್ರೀವ್ಸ್ ಅನ್ನು ಇಬೇ ವೆಬ್ಸೈಟ್ನಲ್ಲಿ ಹರಾಜಿಗಿಟ್ಟಿದ್ದಾನೆ. ಇತ ಹರಾಜಿಟ್ಟ 24 ಗಂಟೆಯಲ್ಲಿ 81 ಸಾವಿರ ಮಂದಿ ವೀಕ್ಷಣೆ ಮಾಡಿದರೆ ಅನೇಕರು ಬಿಡ್ಡಿಂಗ್ ನಡೆಸಿದ್ದಾರೆ.
ಈ ವಿಚಾರ ತಿಳಿದ ಪ್ರೇಯಸಿ ಕೆಲ್ಲಿ ಗ್ರೀವ್ಸ್ ಮಾತ್ರ ಕೋಪಗೊಳ್ಳುವ ಬದಲು ನಕ್ಕು ಸುಮ್ಮನಾಗಿದ್ದಾಳೆ. ಆದರೆ ಇಬೆ ವೆಬ್ ಸೈಟ್ ಮಾತ್ರ ಇಲ್ಲಿ ಮನುಷ್ಯರನ್ನು ಮಾರಲು ಅವಕಾಶವಿಲ್ಲವೆಂದು ಜಾಹೀರಾತನ್ನು ಡಿಲೀಟ್ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.