ಮಲೇರಿಯಾ ಔಷಧ ಪಡೆಯಲು ಭಾರತೀಯರ ಸೆಂಟಿಮೆಂಟ್ ಗೆ ಕೈಹಾಕಿದ ಬ್ರೆಜಿಲ್ ಅಧ್ಯಕ್ಷ

ಗುರುವಾರ, 9 ಏಪ್ರಿಲ್ 2020 (09:25 IST)
ನವದೆಹಲಿ: ಕೊರೋನಾ ಗುಣಪಡಿಸಲು ಭಾರತದಿಂದ ಮಲೇರಿಯಾ ಔಷಧ ಪಡೆಯಲು ವಿವಿಧ ದೇಶಗಳು ಈಗ ವಿವಿಧ ರೀತಿಯಲ್ಲಿ ದಂಬಾಲು ಬಿದ್ದಿವೆ.


ಅತ್ತ ಅಮೆರಿಕಾ ಅಧ‍್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆಯ ತಂತ್ರಕ್ಕೆ ಮೊರೆ ಹೋದರೆ, ಇತ್ತ ಬ್ರೆಜಿಲ್ ಅಧ್ಯಕ್ಷ ಭಾರತೀಯರ ಸೆಂಟಿಮೆಂಟ್ ಗೇ ಕೈ ಹಾಕಿದ್ದಾರೆ. ರಾಮಾಯಣದ ಉದಾಹರಣೆ ನೀಡಿ ಮಲೇರಿಯಾ ಔಷಧ ನೀಡಲು ನಯವಾಗಿ ಮನವಿ ಮಾಡಿದ್ದಾರೆ.

ರಾಮಾಯಣದಲ್ಲಿ ಲಕ್ಷ್ಮಣನನ್ನು ಬದುಕಿಸಲು ಹನುಮಂತ ಸಂಜೀವಿನಿ ಔಷಧ ತರುವ ಕತೆಗೆ ಹೋಲಿಸಿ ಕೊರೋನಾ ಗುಣಪಡಿಸಲು ಭಾರತದಿಂದ ಮಲೇರಿಯಾ ಔಷಧ ನೀಡುವಂತೆ ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ ಮನವಿ ಮಾಡಿದ್ದಾರೆ. ಇದೀಗ ವಿವಿಧ ರಾಷ್ಟ್ರಗಳ ಬೇಡಿಕೆ ಹಿನ್ನಲೆಯಲ್ಲಿ ಭಾರತ ಮಲೇರಿಯಾ ಔಷಧ ರಫ್ತು ಮಾಡಲು ನಿರ್ಬಂಧ ಸಡಿಲಗೊಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ