ಮನೆಯಲ್ಲೇ ಕೂತು ಉದ್ಯೋಗಿಗಳಿಗೆ ಹೆಚ್ಚುತ್ತಿದೆ ಖಿನ್ನತೆ

ಗುರುವಾರ, 9 ಏಪ್ರಿಲ್ 2020 (09:16 IST)
ಬೆಂಗಳೂರು: ಇಷ್ಟು ದಿನ ಒಮ್ಮೆ ರಜೆ ಸಿಕ್ಕರೆ ಸಾಕು ಎಂದು ಹೇಳುತ್ತಿದ್ದ ನೌಕರರಲ್ಲೇ ಈಗ ಎರಡು ದಿನವಾದರೂ ಕಚೇರಿಗೆ ಹೋಗಲು ಅವಕಾಶ ಕೊಡಿ ಎಂದು ಕೇಳುವಂತಾಗಿದೆ.


ಯಾಕೆಂದರೆ ಪ್ರತಿನಿತ್ಯ ಕಚೇರಿಗೆ ತೆರಳಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಈಗ ಮನೆಯಲ್ಲೇ ಕೂತು ಮನಸ್ಸು ಹತಾಶೆಗೊಳಗಾಗುತ್ತಿದೆ. ಮನೆಯ ನಾಲ್ಕು ಗೋಡೆಗಳ ಮಧ‍್ಯೆ ಕೂತು ಖಿನ್ನತೆಗೊಳಗಾಗುತ್ತಿದ್ದಾರೆ.

ಅದರಲ್ಲೂ ನಗರವಾಸಿಗಳಲ್ಲಿ ಈ ಸಮಸ್ಯೆ ಹೆಚ್ಚಿದೆ. ಇದಕ್ಕಾಗಿ ಆದಷ್ಟು ಮನಸ್ಸಿಗೆ ಉಲ್ಲಾಸ ನೀಡುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ಮನೆಯಿಂದಲೇ ಕೆಲಸ ಮಾಡುತ್ತಿದ್ದರೂ ಹೊರಗಡೆ ಪ್ರಪಂಚದ ಸಂಪರ್ಕವಿಲ್ಲದೇ ಬೇಸತ್ತಿದ್ದರೆ ಕೆಲವು ಕಾಲ ಬಿಡುವು ಪಡೆದುಕೊಂಡು ನಿಮ್ಮ ಪ್ರೀತಿ ಪಾತ್ರರ ಜತೆ ಫೋನ್ ನಲ್ಲಿ ಮಾತನಾಡಿ. ನಿಮಗೆ ಮನಸ್ಸಿಗೆ ಅನಿಸಿದ್ದನ್ನು ಬರೆಯುವ ಹವ್ಯಾಸ ಮಾಡಿಕೊಳ್ಳಿ. ಹಾಗೆಯೇ ಆರೋಗ್ಯಕರ ನಿದ್ರೆ ಕೂಡಾ ಮುಖ್ಯ. ಹೆಚ್ಚು ಆಸಕ್ತಿಯಿರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆದಷ್ಟು ಮನಸ್ಸಿನ ಬೇಸರ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ