ಬ್ರಿಟನ್ನಿನಲ್ಲಿ ದಾವೂದ್ ಇಬ್ರಾಹಿಂ ಆಸ್ತಿ ಮುಟ್ಟುಗೋಲು

ಬುಧವಾರ, 13 ಸೆಪ್ಟಂಬರ್ 2017 (11:01 IST)

ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬಹುದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಬ್ರಿಟನ್`ನಲ್ಲಿದ್ದ ದಾವೂದ್ ಇಬ್ರಾಹಿಂ ಆಸ್ತಿಯನ್ನ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.
 

2015ರಲ್ಲಿ ದಾವೂದ್ ಇಬ್ರಾಹಿಂ ಆಸ್ತಿಗೆ ಸಂಬಂಧಿಸಿದ ಮಾಹಿತಿಗಳನ್ನೊಳಗೊಂಡ ಕಡತವನ್ನ ಭಾರತ ಸರ್ಕಾರ ಬ್ರಿಟನ್ನಿಗೆ ಹಸ್ತಾಂತರಿಸಿತ್ತು. ಇದರ ಆಧಾರದ ಮೇಲೆಯೇ ಬ್ರಿಟನ್ ಸರ್ಕಾರ ಈ ಕ್ರಮ ಕೈಗೊಂಡಿದೆ. ವಾರ್ ವಿಕ್ ಸೇರ್`ನಲ್ಲಿ ರೆಸ್ಟೋರೆಂಟ್ ಮತ್ತು ಹಲವು ಕಟ್ಟಡಗಳು ಸೇರಿ 6.7 ಬಿಲಿಯನ್ ಡಾಲರ್ ಮೌಲ್ಯದ ಾಸ್ತಿ ಮುಟ್ಟುಗೋಲು ಹಾಕಿಕೊಂಡಿರುವುದಾಗಿ ತಿಳಿದು ಬಂದಿದೆ.

ಬ್ರಿಟನ್ನಿನಲ್ಲಿ ಹಣಕಾಸು ವ್ಯವಹಾರ ನಡೆಸುವವರ ಮೇಲೆ ನಿರ್ಬಂಧ ವಿಧಿಸಲಾಗಿರುವವರ ಪಟ್ಟಿಯಲ್ಲಿರುವ ಏಕೈಕ ಭಾರತೀಯ ದಾವೂದ್ ಇಬ್ರಾಹಿಂ ಎಂದು ಆಗಸ್ಟ್ 22ರಂದೇ ಪಿಟಿಐ ವರದಿ ಮಾಡಿತ್ತು.  ಪಾಕಿಸ್ತಾನದ ಕರಾಚಿಯ 3 ವಿಳಾಸಗಳು ಸೇರಿ ದಾವೂದ್ 21 ಅಲಿಯಾಸ್ ಹೆಸರುಗಳನ್ನ ನೀಡಿರುವುದು ಪತ್ತೆಯಾಗಿದೆ ಎಂದು ವರದಿಯಾಗಿತ್ತು. ಈ ಕ್ರಮದಿಂದಾಗಿ ದಾವೂದ್ ಹಣ ವರ್ಗಾವಣೆ ನಿರ್ಬಂಧ ಮತ್ತು ಆಸ್ತಿಗೋಲು ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಅದರಂತೆ ಈಗ ಮುಟ್ಟುಗೋಲು ನಡೆದಿದೆ.

1993ರ ಮುಂಬೈ ಸರಣಿ ಸ್ಪೋಟ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದಾವೂದ್ ಇಬ್ರಾಹಿಂ, ಆತನ ಬೇಟೆಗೆ ಬಾರತ ಹಲವು ವರ್ಷಗಳಿಂದ ಪ್ರಯತ್ನಿಸುತ್ತಲೇ ಇದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ