ಲಂಡನ್: ಕೆಲವು ಮಹಿಳೆಯರು ತಮ್ಮ ದೇಹ ಸೌಂದರ್ಯಕ್ಕಾಗಿ ಏನೆಲ್ಲವೋ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಇರಲಾರದ ಆಪತ್ತು ಮೈಮೇಲೆಳೆದುಕೊಳ್ಳುತ್ತಾರೆ. ಬ್ರಿಟನ್ ನ ಮಹಿಳೆಯೊಬ್ಬಳು ಅದೇ ರೀತಿ ಮಾಡಬಾರದ ಜಾಗದಲ್ಲಿ ಆಪರೇಷನ್ ಮಾಡಿಸಲು ಹೋಗಿ ಸಾವನ್ನಪ್ಪಿದ್ದಾಳೆ.
38 ವರ್ಷದ ಕ್ರೇಡಲ್ ಬ್ರೌನ್ ಎಂಬಾಕೆ ತನ್ನ ಬಟ್ ಲಿಫ್ಟ್, ಸ್ತನ, ಹೊಟ್ಟೆಯ ಗಾತ್ರ ಬದಲಾವಣೆ ಮಾಡಲು ಶಸ್ತ್ರಚಿಕಿತ್ಸೆಗೊಳಗಾಗಿದ್ದಳು. ಇದಕ್ಕಾಗಿ ಸುಮಾರು 6 ಲಕ್ಷ ರೂ. ಖರ್ಚು ಮಾಡಿದ್ದಳು. ಆದರೆ ಇಂತಹ ಶಸ್ತ್ರಚಿಕಿತ್ಸೆಗಳು ಯಾವತ್ತೂ ಸೇಫ್ ಅಲ್ಲ ಎನ್ನುವುದು ಮತ್ತೆ ಪ್ರೂವ್ ಆಗಿದೆ.
ಶಸ್ತ್ರಚಿಕಿತ್ಸೆ ನಡೆದ ಕೆಲವೇ ಕ್ಷಣಗಳಲ್ಲಿ ಕ್ರೇಡಲ್ ಸಾವನ್ನಪ್ಪಿದ್ದಾಳೆ. ಆಕೆಗೆ ಉಸಿರಾಟದ ಸಮಸ್ಯೆ ಎದುರಾಗಿದ್ದು ಸಾವನ್ನಪ್ಪಿದ್ದಾಳೆ. ಆದರೆ ತಕ್ಷಣವೇ ಆಕೆಯ ಮೃತದೇಹವನ್ನು ಕುಟುಂಬಸ್ಥರಿಗೆ ನೋಡಲು ಅವಕಾಶ ಕೊಡಲಿಲ್ಲವಂತೆ. ಪರಿಶೀಲಿಸಿದಾಗ ಆಕೆಯ ದೇಹದ ಪ್ರಮುಖ ಅಂಗಾಂಗಗಳೇ ಇರಲಿಲ್ಲ ಎನ್ನುವುದು ಕುಟುಂಬಸ್ಥರ ಆರೋಪವಾಗಿದೆ.
ವೈದ್ಯರ ನಿರ್ಲ್ಯಕ್ಷದಿಂದಲೇ ಸಾವನ್ನಪ್ಪಿದೆ ಎಂಬ ಕಾರಣ ನೀಡಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಆಕೆಯ ಸಾವು ನಿಜವಾಗಿಯೂ ಶಸ್ತ್ರಚಿಕಿತ್ಸೆಯ ಪರಿಣಾಮ ಆಗಿದೆಯಾ ಅಥವಾ ಆಕೆಯ ಅಂಗಾಂಗಗಳನ್ನು ಅಪಹರಿಸಲಾಗಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.