ಪಾಕಿಸ್ತಾನದಲ್ಲಿ ವಿದ್ಯುತ್ ಶುಲ್ಕ ಕೇಳಿದರೆ ನಾವೇ ಪರವಾಗಿಲ್ಲ ಅಂತೀರಿ

Krishnaveni K

ಗುರುವಾರ, 15 ಆಗಸ್ಟ್ 2024 (09:07 IST)
ಇಸ್ಲಾಮಾಬಾದ್: ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿದ್ದು, ಅಲ್ಲಿ ಎಲ್ಲವೂ ದುಬಾರಿಯೇ. ಅದರಲ್ಲೂ ಅಲ್ಲಿನ ವಿದ್ಯುತ್ ಶುಲ್ಕ ಕೇಳಿದರೆ ನಾವು ಎಷ್ಟು ಉತ್ತಮ ಮಟ್ಟದಲ್ಲಿದ್ದೇವೆ ಎಂದು ಗೊತ್ತಾಗುತ್ತದೆ.

ಪಾಕಿಸ್ತಾನದಲ್ಲಿ ಪೆಟ್ರೋಲ್-ಡೀಸೆಲ್ ನಿಂದ ಹಿಡಿದು ಜನರ ಅಗತ್ಯ ವಸ್ತುಗಳ ಬೆಲೆ ಎಲ್ಲವೂ ಗಗನಕ್ಕೇರಿದೆ. ಸಾಮಾನ್ಯ ಜನರಿಗೆ ಬದುಕು ತುಂಬಾ ದುಸ್ತರವಾಗಿದೆ. ಅದರಲ್ಲೂಇಲ್ಲಿ ವಿದ್ಯುತ್ ಶುಲ್ಕ ಎಷ್ಟು ದುಬಾರಿ ಎಂದರೆ ಮನೆ ಬಾಡಿಗೆಯೂ ಇದಕ್ಕಿಂತ ಕಡಿಮೆಯಿರುತ್ತದಂತೆ.

ಕಳೆದ ಒಂದು ವರ್ಷದಲ್ಲ ಪಾಕಿಸ್ತಾನದಲ್ಲಿ 14 ಬಾರಿ ವಿದ್ಯುತ್ ಶುಲ್ಕ ಏರಿಕೆ ಮಾಡಲಾಗಿದೆ. ಮಾರ್ಚ್ 2024 ಕ್ಕೆ ಅನ್ವಯಿಸುವಂತೆ ಇಲ್ಲಿ ವಿದ್ಯುತ್ ಬೆಲೆ ಯೂನಿಟ್ ಗೆ ಗರಿಷ್ಠ 7.06 ರೂ. ಇದೆ. ಇತ್ತೀಚೆಗಷ್ಟೇ ವಿದ್ಯುತ್ ಬೆಲೆಯನ್ನು ಪ್ರತಿ ಯೂನಿಟ್ ಗೆ 2.56 ಪಾಕಿಸ್ತಾನಿ ರೂಪಾಯಿಗೆ ಏರಿಕೆ ಮಾಡಲಾಗಿತ್ತು.

ಇದರಿಂದಾಗಿ ಜನಸಾಮಾನ್ಯರಿಗೆ ಮನೆ ಬಾಡಿಗೆಗಿಂತ ವಿದ್ಯುತ್ ಶುಲ್ಕವೇ ದುಬಾರಿಯಾಗುತ್ತಿದೆ. ಹೀಗಾಗಿ ನಮಗೆ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ವಿದ್ಯುತ್ ಶುಲ್ಕ ಕಡಿಮೆ ಮಾಡಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲಾ ವಸ್ತುಗಳ ಜೊತೆಗೆ ಪಾಕಿಸ್ತಾನಿಯರಿಗೆ ವಿದ್ಯುತ್ ಶುಲ್ಕವೇ ದೊಡ್ಡ ಹೊರೆಯಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ