ಬೈ ಮಿಸ್ಟೇಕ್! ಮಗಳನ್ನೇ ಕೊಂದ ತಂದೆ!
ಮನೆಯೊಳಗೆ ಯಾರೋ ಆಗಂತುಕರು ಬಂದಿದ್ದಾರೆಂದು ತಪ್ಪಾಗಿ ತಿಳಿದ ತಂದೆ ಹಿಂದೆ ಮುಂದೆ ನೋಡದೇ ಗುಂಡು ಹಾರಿಸಿದ್ದಾರೆ. ಪರಿಣಾಮ, 16 ವರ್ಷದ ಮಗಳು ಮೃತಪಟ್ಟಿದ್ದಾಳೆ.
ಹತ್ತಿರ ಹೋಗಿ ನೋಡಿದಾಗ ಮಗಳು ಎಂದು ತಿಳಿದು ಶಾಕ್ ಆದ ದಂಪತಿ ತಕ್ಷಣವೇ ಆಂಬ್ಯುಲೆನ್ಸ್ ಗೆ ಕರೆಮಾಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ಆಕೆಯ ಪ್ರಾಣ ಹೋಗಿದೆ. ಮಗಳನ್ನೇ ಕೊಂದೆ ಎಂದು ತಿಳಿದ ಪೋಷಕರ ದುಃಖ ಮೇರೆ ಮೀರಿದೆ.