ಕೌಲಾಲಂಪುರ, ಮಲೇಶಿಯಾ: ಕೌಲಾಲಂಪುರ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಶ್ರೀಲಂಕಾ ರಾಯಭಾರಿಯ ಮೇಲೆ ಪ್ರತಿಭಟನೆಕಾರರ ಐವರ ಗುಂಪು ಅಮಾನೀಯವಾಗಿ ಹಲ್ಲೆ ಮಾಡಿದ ಘಟನೆ ಸಂಭವಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಲೇಶಿಯಾ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಈ ಘಟನೆಯ ಬಳಿಕ ಕೊಲಂಬೊದಲ್ಲಿ ಶ್ರೀಲಂಕಾದ ವಿದೇಶಾಂಗ ಕಾರ್ಯದರ್ಶಿ ಎಸಾಲಾ ವೀರಾಕೂನ್ ಮಲೇಶಿಯಾದ ಉನ್ನತ ರಾಯಭಾರಿ ವಾನ್ ಜೈದಿ ವಾನ್ ಅಬ್ದುಲ್ಲಾ ಅವರನ್ನು ಕರೆಸಿಕೊಂಡು ಕೊಲಂಬೊದ ರಾಜತಾಂತ್ರಿಕ ನಿಯೋಗಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಆಗ್ರಹಿಸಿದರು. ಸಂಭವನೀಯ ಅಪಾಯದ ಬಗ್ಗೆ ಎಚ್ಚರಿಕೆಗಳನ್ನು ನೀಡಿದ್ದರೂ ಮಲೇಶಿಯಾ ಅಧಿಕಾರಿಗಳು ಅಗತ್ಯ ರಕ್ಷಣೆ ನೀಡುವಲ್ಲಿ ವಿಫಲವಾದ ಬಗ್ಗೆ ವಿದೇಶಾಂಗ ಸಚಿವಾಲಯವು ನಿರಾಶೆ ವ್ಯಕ್ತಪಡಿಸಿದೆ.