ಹೃದಯಾಘಾತಕ್ಕೆ ತಿಂಗಳ ಮುಂಚೇ ಸಿಗುವ ಮುನ್ಸೂಚನೆಗಳೇನು: ಡಾ ಸಿಎನ್ ಮಂಜುನಾಥ್

Krishnaveni K

ಗುರುವಾರ, 10 ಜುಲೈ 2025 (10:05 IST)
ಹೃದಯಾಘಾತವಾಗುವ ಕೆಲವು ದಿನಗಳ ಮೊದಲೇ ನಮಗೆ ಸಿಗುವ ಸೂಚನೆಗಳೇನು? ದುರಾಭ್ಯಾಸಗಳಿಲ್ಲದಿದದ್ದರೂ ಹೃದಯಾಘಾತವಾಗುವುದು ಯಾಕೆ ಎಂಬುದಕ್ಕೆ ಡಾ ಸಿಎನ್ ಮಂಜುನಾಥ್ ಸಂದರ್ಶನವೊಂದರಲ್ಲಿ ನೀಡಿದ ವಿವರಣೆ ಇಲ್ಲಿದೆ.

ಜೀವನ ಶೈಲಿ ಬದಲಾಗಿರುವುದೇ ಹೃದಯಾಘಾತ ಹೆಚ್ಚಳಕ್ಕೆ ಕಾರಣ. ಇದು ಕಳೆದ 15 ವರ್ಷಗಳಲ್ಲಿ ಹೆಚ್ಚಾಗಿದೆ. ಧೂಮಪಾನ ಮದ್ಯಪಾನ ಮಾಡದವರಲ್ಲಿ ಅನುವಂಶೀಯ ಕಾರಣಗಳಿರುತ್ತವೆ. ಹೃದಯಾಘಾತಕ್ಕೊಳಗಾದ ಇಂತಹವರ ಕುಟುಂಬದಲ್ಲಿ ಹೃದಯಾಘಾತವಾದ ಹಿನ್ನಲೆಯಿತ್ತು. 15-20% ಹೃದಯಾಘಾತವಾದ ಯುವಕರಲ್ಲಿ ನಿಖರ ಕಾರಣಗಳಿಲ್ಲ. ಆದರೆ ವಾಯು ಮಾಲಿನ್ಯ, ಮಾನಸಿಕ ಒತ್ತಡ ಕಾರಣದಿಂದ ಹೃದಯಾಘಾತವಾಗಿರುತ್ತದೆ.

ಕುಟುಂಬದಲ್ಲಿ ಹೃದಯಾಘಾತದ ಹಿನ್ನಲೆಯಿದ್ದರೆ 25-30 ರ ಆಸುಪಾಸಿನ ವಯಸ್ಸಿನಲ್ಲಿ ಹೃದಯಕ್ಕೆ ಸಂಬಂಧಿಸಿದ ಪರೀಕ್ಷೆ ನಡೆಸಬೇಕು. ಅಥವಾ ಧೂಮಪಾನ, ಮಧುಮೇಹ ಇದ್ದವರೂ ಸಿಟಿ ಆಂಜಿಯೋಗ್ರಾಮ್ ಮಾಡಿದರೆ ರಕ್ತನಾಳಗಳ ಸ್ಥಿತಿಗತಿ ತಿಳಿಯುತ್ತದೆ.

ಕೆಲವು ಹೃದಯಾಘಾತವಾದ ರೋಗಿಗಳಿಗೆ ಮುನ್ಸೂಚನೆ ಸಿಗುತ್ತದೆ. ನಡೆದಾಗ, ಊಟ ಮಾಡಿದಾಗ, ಹತ್ತುವಾಗ ಎದೆ ಉರಿ ಬಂದರೆ ಹೃದಯದ ರಕ್ತನಾಳಗಳಲ್ಲಿ ಬ್ಲಾಕ್ ಇದೆ ಎಂದರ್ಥ. ಇದುವೇ ಹೃದಯದ ಸಮಸ್ಯೆಯ ಮುನ್ಸೂಚನೆಯಾಗುತ್ತದೆ. ಕೆಲವರಿಗೆ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಬಂದು ವಾಂತಿಯಾಗಬಹುದು. ಆದರೆ ಇದನ್ನು ಹಲವರು ಗ್ಯಾಸ್ಟ್ರಿಕ್ ಎಂದು ತಪ್ಪು ತಿಳಿದುಕೊಳ್ಳುತ್ತಾರೆ. ಅಂತಹ ಸಂದರ್ಭದಲ್ಲಿ ಉದಾಸೀನ ಮಾಡದೇ ತಕ್ಷಣವೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ