ಭಾರತ ಕಿರಿಕ್ ಮಾಡ್ತಿದೆ ಎಂದ ಚೀನಾ

ಗುರುವಾರ, 3 ಆಗಸ್ಟ್ 2017 (09:43 IST)
ನವದೆಹಲಿ: ಡೋಕ್ಲಾಂ ಗಡಿ ವಿಚಾರದಲ್ಲಿ ಮತ್ತೆ ಚೀನಾ ಭಾರತಕ್ಕೆ ಬೆದರಿಕೆ ಹಾಕುವ ಯತ್ನ ನಡೆಸಿದೆ. ಗಡಿಯಲ್ಲಿ ನಾವು ತಾಳ್ಮೆಯಿಂದಿದ್ದರೂ, ಭಾರತವೇ ಅನಾವಶ್ಯಕವಾಗಿ ಕಿರಿಕ್ ಮಾಡ್ತಿದೆ ಎಂದು ಆರೋಪಿಸಿದೆ.


ಮತ್ತೊಮ್ಮೆ ಸೇನೆ ಹಿಂಪಡೆಯುವಂತೆ ಭಾರತಕ್ಕೆ ಎಚ್ಚರಿಸಿರುವ ಚೀನಾ, ಭಾರತ ಕಿರಿಕ್ ಮಾಡುವ ಬದಲು ತಪ್ಪು ತಿದ್ದಿಕೊಳ್ಳಬೇಕು. ನಮ್ಮ ಗಡಿಯೊಳಗೆ ಪ್ರವೇಶಿಸಿ ನಮ್ಮ ಸಾರ್ವಭೌಮತೆಗೆ ಭಾರತ ಧಕ್ಕೆ ತಂದಿದೆ ಎಂದು ಆರೋಪಿಸಿದೆ.

ಆದರೆ ಚೀನಾ ಬೆದರಿಕೆಗೆ ಜಗ್ಗದ ಭಾರತ, ಯಾವುದೇ ಕಾರಣಕ್ಕೂ ಸೇನೆ ಹಿಂಪಡೆಯುವುದಿಲ್ಲ ಎಂದು ಖಡಕ್ ಆಗಿ ತಿರುಗೇಟು ನೀಡಿದೆ. ಡೋಕ್ಲಾಂಗೆ ರಸ್ತೆ ನಿರ್ಮಿಸಿ ಚೀನಾ ಯಥಾಸ್ಥಿತಿ ಒಪ್ಪಂದ ಮುರಿದಿದೆ. ಚೀನಾ ಈ ಭಾಗದಲ್ಲಿ ಸೇನೆ ನಿಯೋಜನೆ ಮಾಡಿರುವುದಕ್ಕೆ ಪ್ರತಿಯಾಗಿ ನಾವೂ ಸೇನೆ ನಿಯೋಜಿಸಿದ್ದೇವೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ ಎಂದು ಭಾರತ ಸ್ಪಷ್ಟವಾಗಿ ಹೇಳಿದೆ.

ಇದನ್ನೂ ಓದಿ..  ಬಂಧನವಾಗ್ತಾರಾ ಡಿಕೆ ಶಿವಕುಮಾರ್?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ