ಸೇನೆ ಭಾರತ ಗಡಿ ಪ್ರವೇಶಿಸಿದ್ದು ತನಗೆ ಗೊತ್ತೇ ಇಲ್ಲ ಎಂದ ಚೀನಾ

ಗುರುವಾರ, 17 ಆಗಸ್ಟ್ 2017 (09:34 IST)
ಬೀಜಿಂಗ್: ಲಡಾಕ್ ಪ್ರದೇಶದಲ್ಲಿ ಭಾರತದ ಗಡಿಯೊಳಗೆ ಚೀನಾ ಲಿಬರೇಷನ್ ಆರ್ಮಿ ಪ್ರವೇಶಿಸಲು ಯತ್ನಿಸಿತ್ತು ಎಂದು ನಿನ್ನೆ ವರದಿಯಾಗಿತ್ತು. ಆದರೆ ಈ ವಿಷಯ ತನಗೆ ಗೊತ್ತೇ ಇಲ್ಲ ಎಂದು ಚೀನಾ ಹೇಳಿಕೊಂಡಿದೆ.

 
ತನ್ನ ಸೇನೆ ಭಾರತದ ಗಡಿಯೊಳಗೆ ಅತಿಕ್ರಮಿಸಲು ಯತ್ನಿಸಿತ್ತು ಎಂದು ತನಗೆ ಗೊತ್ತಿಲ್ಲ ಎಂದು ಚೀನಾದ ವಿದೇಶಾಂಗದ ಸಚಿವಾಲಯದ ವಕ್ತಾರರು ಉಲ್ಟಾ ಹೊಡೆದಿದ್ದಾರೆ.

‘ಲಿಬರೇಷನ್ ಸೈನಿಕರು ಗಡಿಯಲ್ಲಿ ಗಸ್ತು ತಿರುಗುತ್ತಿರುತ್ತಾರೆ. ಆದರೆ ಅವರು ಭಾರತದ ಗಡಿಯೊಳಗೆ ನುಗ್ಗಿದ ವಿಷಯ ನಮಗೆ ಗೊತ್ತಿಲ್ಲ’ ಎಂದು ವಿದೇಶಾಂಗ ವಕ್ತಾರ ಹು ಚುನ್ಶಿಂಗ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ.. ಯುವರಾಜ್ ಸಿಂಗ್, ಸುರೇಶ್ ರೈನಾ ತಂಡದಿಂದ ಕೈ ಬಿಟ್ಟಿದ್ದರ ರಹಸ್ಯ ಬಯಲು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ