ಚೀನಾ ಸೈಬರ್ ದಾಳಿ!

ಗುರುವಾರ, 7 ಏಪ್ರಿಲ್ 2022 (10:44 IST)
ಬೀಜಿಂಗ್ : ವಿಎಲ್ಸಿ ಮೀಡಿಯಾ ಪ್ಲೇಯರ್ ಬಳಸಿಕೊಂಡು ಚೀನಿ ಹ್ಯಾಕರ್ಗಳು ಸೈಬರ್ ದಾಳಿ ನಡೆಸುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

ಚೀನಾ ಸರ್ಕಾರ ಜೊತೆ ಸಂಬಂಧ ಹೊಂದಿರುವ ಹ್ಯಾಕರ್ ಗುಂಪು, ಕಂಪ್ಯೂಟರ್ ಮತ್ತು ಮೊಬೈಲ್ನಲ್ಲಿ ಬಳಸುವ ವಿಎಲ್ಸಿ ಮೀಡಿಯಾ ಪ್ಲೇಯರ್ ಮೂಲಕ ಸೈಬರ್ ದಾಳಿ ಮಾಡಲು ಮುಂದಾಗುತ್ತಿದೆ ಎಂದು ಸೈಬರ್ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. 

ಈ ಚಟುವಟಿಕೆಗಳನ್ನು ಸಿಕಾಡಾ ಎಂಬ ಹ್ಯಾಕರ್ ಗುಂಪು ಮಾಡುತ್ತಿದೆ ಎಂದು ವರದಿಯಾಗಿದೆ. 2006ರಿಂದ ಸಿಕಾಡಾ ಕಾರ್ಯನಿರ್ವಹಿಸುತ್ತಿದೆ.

ಚೀನಾ ಸರ್ಕಾರದ ಬೆಂಬಲಿತ ಸಿಕಾಡಾ ಹ್ಯಾಕರ್ಗಳು, ವಿಎಲ್ಸಿ ಮೀಡಿಯಾ ಪ್ಲೇಯರ್ ಬಳಸಿ ಮಾಲ್ವೇರ್ಗಳನ್ನು ರವಾಸಿಸುತ್ತಿದ್ದಾರೆ. ಈ ಮಾಲ್ವೇರ್ ಸಿಸ್ಟಮ್ನಲ್ಲಿರುವ ಎಲ್ಲ ಮಾಹಿತಿಯನ್ನು ಕಲೆಹಾಕುತ್ತದೆ. ಅಲ್ಲದೇ ಚಾಲನೆಯಲ್ಲಿರುವ ಪ್ರಕ್ರಿಯೆಗಳು, ಡೌನ್ಲೋಡ್ ಮಾಡಿದ ಮಾಹಿತಿಗಳನ್ನು ಕದ್ದು, ಹ್ಯಾಕರ್ಗಳಿಗೆ ರವಾನಿಸುತ್ತಿವೆ ಎಂದು ತಜ್ಞರು ಮಾಹಿತಿಯನ್ನು ಕೊಟ್ಟಿದ್ದಾರೆ.

ಭಾರತ, ಅಮೆರಿಕಾ, ಕೆನಡಾ, ಹಾಂಕಾಂಗ್, ಟರ್ಕಿ, ಇಸ್ರೇಲ್, ಇಟಲಿ ಮಾದಲಾದ ದೇಶಗಳಲ್ಲಿ ಸಿಕಾಡಾ ಸೈಬರ್ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ