ಧರ್ಮಸ್ಥಳ: ಇಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವು ಶವಗಳನ್ನು ಹೂತಿಡಲಾಗಿದೆ ಎಂದು ಅನಾಮಿಕ ದೂರುದಾರ ತೋರಿಸಿದ ನಾಲ್ಕನೇ ಸ್ಥಳದಲ್ಲೂ ಇಂದು ಯಾವುದೇ ಕಳೆಬರಹ ಪತ್ತೆಯಾಗಿಲ್ಲ. ಇದೀಗ ಎಸ್‌ಐಟಿ ಅಧಿಕಾರಿಗಳು ಐದನೇ ಪಾಯಿಂಟ್‌ನಲ್ಲಿ ಕಾರ್ಯಚರಣೆ ನಡೆಸಲು ಚಿಂತಿಸಿದ್ದಾರೆ.
ಒಂದನೇ ಪಾಯಿಂಟ್ ಒಂದರಲ್ಲಿ ಶವ ಶೋಧದ ವೇಳೆ ಹರಿದ ಕೆಂಪು ರವಿಕೆ ಪತ್ತೆ, ಪಾನ್ ಕಾರ್ಡ್, ಮತ್ತೊಂದು ಡೆಬಿಟ್ ಕಾರ್ಡ್ ಪತ್ತೆಯಾಗಿದೆ.
ಇದೀಗ ಈ ಪತ್ತೆಯಾದ ವಸ್ತುಗಳು ದೂರುದಾರ ನೀಡಿದ ಹೇಳಿಕೆಯಂತೆ ಮೃತದೇಹಗಳಿಗೆ ಸಂಬಂಧ ಪಟ್ಟಿದ್ದ ಎಂಬ ಸಂಶಯ ಶುರುವಾಗಿದೆ. ಯಾಕೆಂದರೆ ಅನಾಮಿಕ ನೀಡಿದ ದೂರಿನಲ್ಲಿ ಹೂತು ಹಾಕಿದ ಮಹಿಳೆಯರ ಮೃತದೇಹದಲ್ಲಿ ಹರಿದ ಬಟ್ಟೆಗಳೇ ಇರುತ್ತಿದ್ದವು ಎಂದು ಉಲ್ಲೇಖಿಸಿದ್ದಾನೆ.
ನಿನ್ನೆಯಿಂದ ನಡೆದ ಮೃತದೇಹ ಉತ್ಖನನದಲ್ಲಿ ಇದುವರೆಗೆ ಯಾವುದೇ ಕಳೆಬರಹ ಪತ್ತೆಯಾಗಿಲ್ಲ. ದೂರುದಾರ ಒಟ್ಟು 13 ಸ್ಥಳಗಳನ್ನು ಗುರುತಿಸಿದ್ದು, ಈಗಾಗಲೇ ನಾಲ್ಕು ಸ್ಥಳಗಳಲ್ಲಿ ಉತ್ಖನನ ಸಂಪೂರ್ಣ ಮಾಡಲಾಗಿದೆ. ಆದರೆ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ.