ಭಾರತ-ನೇಪಾಳ ಗಡಿಯಲ್ಲಿ ಗಲಭೆ ಉಂಟುಮಾಡಲು ಹಣ ನೀಡುತ್ತಿರುವ ಚೀನಾ

ಶುಕ್ರವಾರ, 4 ಸೆಪ್ಟಂಬರ್ 2020 (11:51 IST)
ನವದೆಹಲಿ: ಭಾರತ ಮತ್ತು ನೇಪಾಳ ನಡುವೆ ಸಂಬಂಧ ಹಳಸುವಂತೆ ಮಾಡಿದ ಚೀನಾ ಈಗ ತನ್ನ ಬೇಳೆ ಬೇಯಿಸಿಕೊಳ್ಳಲು ನೇಪಾಳ ಗಡಿಯಲ್ಲಿ ಶಾಂತಿ ಕದಡುವ ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.


ಭಾರತ-ನೇಪಾಳ ಗಡಿಯಲ್ಲಿ ವಿವಿಧ ಸಂಘಟನೆಗಳು ಗಡಿ ವಿಚಾರವನ್ನು ಮುಂದಿಟ್ಟುಕೊಂಡು ಭಾರತದ ವಿರುದ್ಧ ಪ್ರತಿಭಟನೆ ನಡೆಸಲು ಕೆಲವು ಸಂಘಟನೆಗಳಿಗೆ ಸುಮಾರು 2.5 ಕೋಟಿ ರೂ.ಗಳಷ್ಟು ಹಣ ನೀಡಿದೆ ಎಂದು ಗುಪ್ತಚರ ಮಾಹಿತಿ ಬಂದಿದೆ. ಭಾರತ ವಿರೋಧಿ ಪ್ರತಿಭಟನೆಗಳು, ಚಟುವಟಿಕೆಗಳಿಗೆ ಚೀನಾ ಹಣ ಒದಗಿಸುತ್ತಿದೆ ಎಂದು ತಿಳಿದುಬಂದಿದೆ. ಆ ಮೂಲಕ ನೇಪಾಳವನ್ನು ಭಾರತದಿಂದ ಬೇರ್ಪಡಿಸಿ ತನ್ನ ತೆಕ್ಕೆಗೆ ಸಂಪೂರ್ಣವಾಗಿ ಎಳೆದುಕೊಂಡು ಗಡಿಯಲ್ಲಿ ಪ್ರಾಬಲ್ಯ ಸಾಧಿಸಲು ಚೀನಾ ಹುನ್ನಾರ ನಡೆಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ