ನಾಯಿ ಬೊಗಳಿತೆಂದು ತೋಟಕ್ಕೆ ಹೋದ ರೈತ: ಆನೆ ದಾಳಿಯಿಂದ ಸಾವು

Sampriya

ಗುರುವಾರ, 7 ಆಗಸ್ಟ್ 2025 (18:20 IST)
Photo Credit X
ಸುಳ್ಯ: ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ದಬ್ಬಡ್ಕ ಎಂಬಲ್ಲಿ ಬುಧವಾರ ತಡರಾತ್ರಿ ಆನೆ ದಾಳಿಗೆ ವ್ಯಕ್ತಿಯೋರ್ವ ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ.

ಮೃತರನ್ನು ದಬ್ಬಡ್ಕ ಕೊಪ್ಪಡ್‌ನ ಶಿವಪ್ಪ (72) ಎಂದು ಗುರುತಿಸಲಾಗಿದ್ದು, ಆನೆ ತುಳಿದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಆಗಸ್ಟ್ 6 ರಂದು ರಾತ್ರಿ 10:30 ರ ಸುಮಾರಿಗೆ ಶಿವಪ್ಪ ಅವರು ಬೊಗಳುವ ನಾಯಿಯನ್ನು ಪರೀಕ್ಷಿಸಲು ಮನೆಯ ಸಮೀಪವಿರುವ ತೋಟಕ್ಕೆ ಕಾಲಿಟ್ಟಾಗ ಆನೆ ದಾಳಿ ನಡೆಸಿತು. 

ತಕ್ಷಣ ಕುಟುಂಬಸ್ಥರು ಸಂಪಾಜೆ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ