ಮತ್ತೊಮ್ಮೆ ಗುಟುರು ಹಾಕಿದ ಚೀನಾ ಅಧ್ಯಕ್ಷ

ಮಂಗಳವಾರ, 1 ಆಗಸ್ಟ್ 2017 (10:53 IST)
ಬೀಜಿಂಗ್: ಚೀನಾ ಜನತೆಗೆ ಶಾಂತಿ ಬೇಕು. ನಾವು ಆಕ್ರಮಣ ಮಾಡಲು ಮುಂದಾಗುವುದಿಲ್ಲ. ಆದರೆ ನಮ್ಮ ಸಾರ್ವಭೌಮತೆಗೆ ಧಕ್ಕೆಯಾದರೆ ಸುಮ್ಮನಿರಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಎಚ್ಚರಿಕೆ ನೀಡಿದ್ದಾರೆ.


ಸೇನಾ ಕಾರ್ಯಕ್ರಮದಲ್ಲಿ ಮಾತನಾಡಿದ  ಅವರು ‘ನಾವು ಸಾಮ್ರಾಜ್ಯ ವಿಸ್ತರಿಸುವ ಹುಚ್ಚು ಇಟ್ಟುಕೊಂಡಿಲ್ಲ. ನಾವು ಶಾಂತಿ ಬಯಸುತ್ತೇವೆ. ಆದರೆ ಚೀನಾ ಗಡಿಯೊಳಗೆ ಯಾವುದೇ ಬಾಹ್ಯ ಶಕ್ತಿಗಳಿಗೆ ನುಗ್ಗಲು ಬಿಡಲ್ಲ. ನಮ್ಮನ್ನು ಕೆಣಕಲು ಬಂದರೆ ಶತ್ರುಗಳನ್ನು ಹೇಳ ಹೆಸರಿಲ್ಲದಂತೆ ಹೊಡೆದೋಡಿಸುತ್ತೇವೆ’ ಎಂದು ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ.

ಭಾರತದೊಂದಿಗೆ ಗಡಿ ವಿವಾದವಿರುವ ಹಿನ್ನಲೆಯಲ್ಲಿ ಜಿನ್ ಪಿಂಗ್ ಇದನ್ನು ಪರೋಕ್ಷವಾಗಿ ಭಾರತವನ್ನು ಉದ್ದೇಶಿಸಿ ಹೇಳಿದ್ದಾರೆ ಎಂದೇ ನಂಬಲಾಗಿದೆ. ಇತ್ತೀಚೆಗೆ ಯುದ್ಧಕ್ಕೆ ಸಿದ್ಧರಾಗಿ ಎಂದು ಜಿನ್ ಪಿಂಗ್ ತಮ್ಮ ಸೈನಿರಿಗೆ ಕರೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ..  ಕಾಜೋಲ್ ಗೆ ಪ್ರತಿದಿನ ಬೈತಾರಂತೆ ಪತಿ ಅಜಯ್ ದೇವಗನ್!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ