ಗಡಿ ತಂಟೆ ಮಾಡುತ್ತಿರುವ ಚೀನಾ: ಭಾರತಕ್ಕೆ ಅಮೆರಿಕಾ ಬೆಂಬಲ

ಗುರುವಾರ, 21 ಮೇ 2020 (10:57 IST)
ನವದೆಹಲಿ: ಒಂದೆಡೆ ಕೊರೋನಾ ವಿರುದ್ಧ ಹೋರಾಡುತ್ತಿದ್ದರೆ, ಇನ್ನೊಂದೆಡೆ ಭಾರತಕ್ಕೆ ನೆರೆಯ ಚೀನಾ ಗಡಿಯಲ್ಲಿ ಸೇನೆಯ ಮೂಲಕ ತಕರಾರು ತೆಗೆಯುತ್ತಿದೆ.


ಚೀನಾ ಗಡಿಯಲ್ಲಿ ಹೆಚ್ಚುವರಿ ಸೈನ್ಯ ನಿಯೋಜಿಸಿದ ಬೆನ್ನಲ್ಲೇ ಭಾರತವೂ ಸುರಕ್ಷಿತೆಯ ದೃಷ್ಟಿಯಿಂದ ಸೈನ್ಯ ಜಮಾಯಿಸಿದೆ. ಈ ನಡುವೆ ಬೇಕೆಂದೇ ಕಾಲು ಕೆರೆಯುತ್ತಿರುವ ಚೀನಾಗೆ ಅಮೆರಿಕಾ ಎಚ್ಚರಿಕೆ ನೀಡಿದೆ.

ಭಾರತದ ವಿರುದ್ಧ ವಿನಾಕಾರಣ ಪ್ರಚೋದನೆ ನಡೆಸುತ್ತಿರುವ ಚೀನಾ ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿ ಅಥವಾ ಭಾರತದ ಗಡಿಯಲ್ಲಿ ತನ್ನ ಪ್ರಾಬಲ್ಯ ಮೆರೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿದೆ. ಇತ್ತೀಚೆಗೆ ಕೊರೋನಾ ವಿಚಾರದಲ್ಲಿ ಚೀನಾ ವಿರುದ್ಧ ಅಮೆರಿಕಾ ಕೆಂಡಾಮಂಡಲವಾಗಿದೆ. ಈಗ ಭಾರತ-ಚೀನಾ ಗಡಿ ವಿಚಾರದಲ್ಲಿ ಅಮೆರಿಕಾ ಭಾರತಕ್ಕೆ ಬೆಂಬಲ ಸೂಚಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ