ಮಗುವನ್ನು ಹೆತ್ತಳು 64 ವರ್ಷದ ವೃದ್ಧೆ

ಶನಿವಾರ, 31 ಡಿಸೆಂಬರ್ 2016 (17:38 IST)
64 ವರ್ಷದ ಮಹಿಳೆಯೋರ್ವರು ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ಚೀನಾದಲ್ಲಿ ನಡೆದಿದ್ದು, ಈಕೆಯೇ ದೇಶದ ಅತಿ ಹಿರಿಯ ತಾಯಿ ಎಂದು ಭಾವಿಸಲಾಗಿದೆ.
ಜೆಲಿನ್ ಪಾಂತ್ಯದಲ್ಲಿರುವ ಆಸ್ಪತ್ತೆಯೊಂದರಲ್ಲಿ ಈ ಮಹಾತಾಯಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಆಕೆ ಯಾರೆಂದು ಬಹಿರಂಗವಾಗಿಲ್ಲ. ಮಗು 3.7 ಕೆಜಿ ತೂಗುತ್ತಿದ್ದು  ಆರೋಗ್ಯವಾಗಿದೆ. 
 
ಜಿಲಿನ್ ಪ್ರಾಂತ್ಯದಲ್ಲಿರುವ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಹಿರಿಯ ಮಹಿಳೆ ಯಾರು ಎನ್ನುವುದನ್ನು ಪತ್ರಿಕೆ ಬಹಿರಂಗಪಡಿಸಿಲ್ಲ. 
 
ದಂಪತಿ ಮಾಧ್ಯಮದ ಮುಂದೆ ಬರಲು ನಿರಾಕರಿಸಿದ್ದು ಮೊದಲ ಮಗುವನ್ನು ಕಳೆದುಕೊಂಡ ಬಳಿಕ ವಿದೇಶದಲ್ಲಿ ಪ್ರನಾಳೀಯ ಫಲೀಕರಣ ಮಾಡಿಕೊಳ್ಳುವುದರ ಮೂಲಕ ಮಗುವನ್ನು ಪಡೆಯಲಾಗಿದೆ ಎನ್ನಲಾಗುತ್ತಿದೆ.
 
ಮಹಿಳೆ ವಾರ್ಡ್‌ನಲ್ಲಿ ಮಲಗಿರುವ ಮತ್ತು ದಾದಿಯೋರ್ವರು ಮಗುವನ್ನು ಎತ್ತಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ