ಬೀಜಿಂಗ್ : ಆರ್ಥಿಕ ದಿವಾಳಿಯನ್ನು ಅನುಭವಿಸುತ್ತಿರುವ ದ್ವೀಪ ರಾಷ್ಟ್ರದಿಂದ 1,00,000 ಅಳಿವಿನಂಚಿನಲ್ಲಿರುವ ಕೋತಿಗಳನ್ನು ಚೀನಾಕ್ಕೆ ರಫ್ತು ಮಾಡುತ್ತಿರುವುದಾಗಿ ಶ್ರೀಲಂಕಾ ತಿಳಿಸಿದೆ.
ಈ ಬಗ್ಗೆ ಶ್ರೀಲಂಕಾದ ಕೃಷಿ ಸಚಿವಾಲಯದ ಉನ್ನತ ಅಧಿಕಾರಿ ಮಾತನಾಡಿ, ಚೀನಾ ದೇಶವು 1 ಲಕ್ಷ ಕೋತಿಗಳ ಆಮದಿಗೆ ಬೇಡಿಕೆ ಇಟ್ಟಿದೆ. ಎಲ್ಲಾ ಕೋತಿಗಳನ್ನು ರಫ್ತು ಮಾಡಲು ಒಪ್ಪಿಗೆ ನೀಡಿದ್ದೇವೆ. ಆದರೆ 1 ಲಕ್ಷ ಕೋತಿಗಳನ್ನು ಒಂದೇ ಪ್ರದೇಶದಿಂದ ಚೀನಾಕ್ಕೆ ಕಳುಹಿಸುತ್ತಿಲ್ಲ.
ಅದರ ಬದಲಾಗಿ ದೇಶದ ಹಲವಾರು ಭಾಗಗಳಲ್ಲಿ ಮಂಗಗಳಿಂದ ಹಾನಿ ಉಂಟಾಗುತ್ತಿರುವ ಪ್ರದೇಶಗಳನ್ನು ಗಣನೆಗೆ ತೆಗೆದುಕೊಂಡು ಅಲ್ಲಿಂದ ಕಳುಹಿಸುತ್ತೇವೆ. ಅವುಗಳಿಂದ ಯಾವುದೇ ಹಾನಿ ಇರದ ಪ್ರದೇಶದಿಂದ ರಫ್ತು ಮಾಡುವುದಿಲ್ಲ ಎಂದು ತಿಳಿಸಿದರು.
ಚೀನಾ ದೇಶ ನೀಡಿರುವ ಸಾಲದ ಸುಳಿಯಲ್ಲಿ ಸಿಲುಕಿರುವ ಶ್ರೀಲಂಕಾ ದೇಶಕ್ಕೆ ಚೀನಾ ಹೇಳಿದಂತೆ ಕೇಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ, 1,000 ಚೀನೀ ಮೃಗಾಲಯಕ್ಕೆ 1 ಲಕ್ಷ ಕೋತಿಗಳನ್ನು ಕಳುಹಿಸಿಕೊಡಲು ಒಪ್ಪಿಗೆ ಸೂಚಿಸಿದೆ. ಪರಿಸರವಾದಿಗಳ ತೀವ್ರ ಹೋರಾಟದ ನಡುವೆಯೂ ಚೀನಾದ ಬೇಡಿಕೆಗೆ ಶ್ರೀಲಂಕಾ ಒಪ್ಪಿಗೆ ಸೂಚಿಸಿದೆ.