ಚೀನಾ, 1,000 ವರ್ಷದಲ್ಲೇ ಭೀಕರ ಮಳೆ: 12 ಲಕ್ಷ ಜನ ನಿರ್ವಸಿತ!

ಗುರುವಾರ, 22 ಜುಲೈ 2021 (08:14 IST)
ಬೀಜಿಂಗ್(ಜು.22): ಕಳೆದ ಒಂದು ಸಾವಿರ ವರ್ಷಗಳಲ್ಲಿಯೇ ಕಂಡುಕೇರಳರಿಯದ ಮಳೆಯ ಅಬ್ಬರಕ್ಕೆ ಚೀನಾದ ಸೆಂಟ್ರಲ್ ಹೆನಾನ್ ಪ್ರಾಂತ್ಯ ತತ್ತರಿಸಿದ್ದು, ಪ್ರವಾಹಕ್ಕೆ ಸಿಲುಕಿ ಈವರೆಗೆ 25 ಮಂದಿ ಸಾವಿಗೀಡಾಗಿದ್ದಾರೆ. ಭಾರೀ ಮಳೆಯಿಂದಾಗಿ 12.4 ಲಕ್ಷ ಜನ ನಿರ್ವಸಿತರಾಗಿದ್ದು, 1.60 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

* ಕಳೆದ ಒಂದು ಸಾವಿರ ವರ್ಷಗಳಲ್ಲಿಯೇ ಕಂಡುಕೇರಳರಿಯದ ಮಳೆಯ ಅಬ್ಬರ
* ಚೀನಾದಲ್ಲಿ 1,000 ವರ್ಷದ ಭೀಕರ ಮಳೆಗೆ 12 ಲಕ್ಷ ಜನ ನಿರ್ವಸಿತ
* ಪ್ರವಾಹಕ್ಕೆ ಸಿಲುಕಿ ಈವರೆಗೆ 25 ಮಂದಿ ಸಾವು

ಚೀನಾದಲ್ಲಿ ಈ ರೀತಿಯ ಮಳೆಯಾಗಿದ್ದು ಕಳೆದ 1000 ವರ್ಷಗಳ ಇತಿಹಾಸದಲ್ಲೇ ಮೊದಲು ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ಝೆಂಗ್ ಝೋಹು ಪ್ರಾಂತ್ಯದಲ್ಲಿ ಮಂಗಳವಾರ ಒಂದೇ ದಿನ ಬರೋಬ್ಬರಿ 457.5 ಮಿ.ಮೀನಷ್ಟುಮಳೆಯಾಗಿದೆ. ಇದು ದೇಶದಲ್ಲಿ ಹವಾಮಾನ ದಾಖಲೆ ಆರಂಭಿಸಿದ ನಂತರದಲ್ಲಿ ಸುರಿದ ಅತ್ಯಂತ ಗರಿಷ್ಠ ಪ್ರಮಾಣ ಎಂದು ವರದಿಯಾಗಿದೆ.
ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಇಲ್ಲಿನ ಅಣೆಕಟ್ಟೆಒಡೆಯುವ ಭೀತಿ ಸಹ ಆರಂಭವಾಗಿದೆ. ಹೀಗಾಗಿ ಹೋಟೆಲ್, ಸಬ್ವೇ ರೈಲು, ಸಾರ್ವಜನಿಕ ಪ್ರದೇಶಗಳಲ್ಲಿ ಸಿಲುಕಿರುವವರ ರಕ್ಷಣೆಗೆ ಚೀನಾ ಸೇನೆ ಧಾವಿಸಿದೆ. ಕಳೆದೊಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಇಡೀ ಪ್ರಾಂತ್ಯ ನೀರಿನಿಂದ ಆವೃತವಾಗಿದೆ. ನದಿಗಳು ಅಪಾಯದ ಮಟ್ಟಮೀರಿ ಹರಿಯುತ್ತಿವೆ. ಜನಸಂಚಾರ ಪ್ರದೇಶ ಮತ್ತು ರೈಲಿನೊಳಗೆ ಪ್ರಯಾಣಿಕರ ಎದೆಮಟ್ಟದವರೆಗೂ ನೀರು ತುಂಬಿಕೊಂಡಿದ್ದು, ಜನರು ಪ್ರಾಣ ಉಳಿವಿಗಾಗಿ ಪರದಾಡುವ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮುಂಜಾಗ್ರತಾ ದೃಷ್ಟಿಯಿಂದ ಹೆನಾನ್ ಪ್ರಾಂತ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ, 260 ವಿಮಾನಗಳು, 160 ರೈಲುಗಳು ಸೇವೆಯನ್ನು ರದ್ದು ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ