ಭಾರತದ ಗಡಿಯೊಳಕ್ಕೆ ನುಗ್ಗಿದ ಚೀನಾ ಸೇನೆ
ಚೀನಾ ಯೋಧರು ಕಬ್ಬಿಣದ ರಾಡ್ ಗಳು, ಕಲ್ಲು ಹೊತ್ತು ತಂದಿದ್ದರು. ಉಭಯ ಸೈನಿಕರ ನಡುವೆ ತಳ್ಳಾಟ ನಡೆದಿದ್ದರಿಂದ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಸೇನಾ ಮೂಲಗಳು ಹೇಳಿವೆ. ಸುಮಾರು ಅರ್ಧಗಂಟೆಗಳ ಕಾಲ ಈ ಸಂಘರ್ಷ ನಡೆದಿತ್ತು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಇಂದು ನಡೆಯಲಿರುವ ದ್ವಜ ಸಭೆಯಲ್ಲಿ ಭಾರತ ಈ ವಿಚಾರವನ್ನು ಪ್ರಸ್ತಾಪಿಸಲಿದೆ ಎನ್ನಲಾಗಿದೆ.