‘ಭಾರತ-ಚೀನಾ ಯುದ್ಧ ಮಾಡಿದ್ರೆ ಯಾರೂ ಸೋಲಲ್ಲ’

ಮಂಗಳವಾರ, 15 ಆಗಸ್ಟ್ 2017 (07:45 IST)
ನವದೆಹಲಿ: ಒಂದು ವೇಳೆ ಭಾರತ ಮತ್ತು ಚೀನಾ ಪರಸ್ಪರ ಯುದ್ಧಕ್ಕಿಳಿದರೆ ಯಾರು ಗೆಲ್ಲಬಹುದು? ಯಾರು ಸೋಲುತ್ತಾರೆ? ಟಿಬೆಟ್ ಧಾರ್ಮಿಕ ಗುರು ದಲೈಲಾಮಾ ಪ್ರಕಾರ ಇಬ್ಬರೂ ಸೋಲಲ್ಲ.

 
ಚೀನಾ ಮತ್ತು ಭಾರತ ಎರಡೂ ರಾಷ್ಟ್ರಗಳೂ ಏಷ್ಯಾದ ಅತ್ಯಂತ ಸಶಕ್ತ ಮಿಲಿಟರಿ ಪಡೆ ಹೊಂದಿರುವ ದೈತ್ಯ ದೇಶಗಳು. ಇವೆರಡು ಯುದ್ಧ ಮಾಡಿದರೆ ಇಬ್ಬರೂ ಸೋಲಲ್ಲ. ಹಾಗಾಗಿ ಎರಡೂ ರಾಷ್ಟ್ರಗಳೂ ಶಾಂತಿಯಿಂದಿರುವುದೇ ಲೇಸು ಎಂದು ದಲೈಲಾಮಾ ಹೇಳಿಕೊಂಡಿದ್ದಾರೆ.

ಒಳ್ಳೆಯ ನೆರೆಯ ರಾಷ್ಟ್ರಗಳಾಗಿ ಎರಡೂ ದೇಶವಾಸಿಗಳು ಜೀವನ ಮಾಡಬೇಕು. ಕೆಲವೊಂದು ಸಲ ಸಣ್ಣ ಪುಟ್ಟ ಅಸಮಾಧಾನಗಳಿದ್ದಿರಬಹುದು. ಆದರೆ ಅದೆಲ್ಲಾ ಸ್ನೇಹಕ್ಕೆ ಅಡ್ಡಿಯಾಗಬಾರದು  ಎಂದು ದಲೈಲಾಮಾ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ.. ಜಿಯೋ ಫೋನ್ ಬುಕಿಂಗ್ ಶುರು! ಮಾಡೋದು ಹೇಗೆ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ