ಉಗ್ರರ ನಿಗ್ರಹಕ್ಕೆ ರೋಬೋ ಸೈನಿಕರು?!

ಭಾನುವಾರ, 13 ಆಗಸ್ಟ್ 2017 (05:50 IST)
ನವದೆಹಲಿ: ಪಾಕ್ ಗಡಿಯಲ್ಲಿ ಉಗ್ರರ ಉಪಟಳ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ಉಗ್ರರ ನಿಗ್ರಹಕ್ಕೆ ಭಾರತೀಯ ಯೋಧರಿಗೆ ಸಹಾಯ ಮಾಡಲು ರೋಬೋಟ್ ಬಳಸಲು ರಕ್ಷಣಾ ಸಚಿವಾಲಯ ಯೋಜನೆ ರೂಪಿಸಿದೆ.

 
ಈಗಾಗಲೇ ಸುಮಾರು 544 ರೋಬೋಗಳನ್ನು ಸಿದ್ಧಪಡಿಸಲಾಗಿದೆ ಎಂದು ಸೇನಾ ಮೂಲಗಳು ಆಂಗ್ಲ ವಾಹಿನಿಯೊಂದಕ್ಕೆ ಹೇಳಿದೆ. ಈ ರೋಬೋಗಳನ್ನು ಬಳಸಿ ಯೋಧರು ಸುಲಭವಾಗಿ ಉಗ್ರರ ಅಡಗುದಾಣ, ಅವರ ಜಾಡನ್ನು ಪತ್ತೆ ಹಚ್ಚಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ರೋಬೋಗಳಿಗೆ ಅತ್ಯಾಧುನಿಕ ಕ್ಯಾಮರಾ ಸೇರಿದಂತೆ ಉಗ್ರರ ಚಲನವಲನಗಳನ್ನು ನಿಖರವಾಗಿ ಗುರುತಿಸಲು ವ್ಯವಸ್ಥೆ ಮಾಡಲಾಗುತ್ತದೆಯಂತೆ. ಇದರಿಂದ ದುರ್ಗಮ ಹಾದಿಗಳಲ್ಲೂ ಸಾಗಿ ಉಗ್ರರ ಚಲನವಲನಗಳನ್ನು ಪತ್ತೆ ಹಚ್ಚಲು ಸೇನೆಗೆ ಸುಲಭವಾಗಿದೆ.

ಇದನ್ನೂ ಓದಿ.. ಕರ್ನಾಟಕದ ದಿಗ್ಗಜರದ್ದೇ ದಾಖಲೆ ಸರಿಗಟ್ಟಿದ ಕನ್ನಡಿ ಕೆಎಲ್ ರಾಹುಲ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ