ತೆಂಗಿನಕಾಯಿ ಕೊರತೆಯ ಬಗ್ಗೆ ತಿಳಿಸಲು ತೆಂಗಿನ ಮರ ಹತ್ತಿದ ಸಚಿವ

ಸೋಮವಾರ, 21 ಸೆಪ್ಟಂಬರ್ 2020 (12:34 IST)
ಕೊಲಂಬೊ: ತೆಂಗಿನಕಾಯಿ ಕೊರತೆಯ ಬಗ್ಗೆ ಜನರಿಗೆ ವಿವರಿಸಲು ಶ್ರೀಲಂಕಾದ ಸಚಿವರೊಬ್ಬರು ತೆಂಗಿನ ಮರ ಏರಿ ವಿವರಣೆ ನೀಡಿದ್ದಾರೆ.

ಶ್ರೀಲಂಕಾದ ರಾಜ್ಯ ಸಚಿವ ಅರುಂಡಿಕಾ ಫರ್ನಾಂಡೊ ಅವರು ಯಂತ್ರದ ಸಹಾಯದಿಂದ ತೆಂಗಿನ ಮರವನ್ನು ಏರಿ, ದೇಶ ಎದುರಿಸುತ್ತಿರುವ ತೆಂಗಿನಕಾಯಿ ಕೊರತೆಯ ಬಗ್ಗೆ ಜನರಿಗೆ ತಿಳಿಸಿದ್ದಾರೆ. ಸ್ಥಳೀಯ ಕೈಗಾರಿಕೆಗೆ ಹಾಗೂ ದೇಶಿಯ ಬಳಕೆಗೆ ದೇಶವು 700ದಶಲಕ್ಷ ತೆಂಗಿನಕಾಯಿ ಕೊರತೆಯನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ.

ಹಾಗೇ ಲಭ್ಯವಿರುವ ಪ್ರತಿಯೊಂದು ಭೂಮಿಯನ್ನು ತೆಂಗಿನ ಕೃಷಿಗೆ ಬಳಸುತ್ತೇವೆ. ಹಾಗೇ ತೆಂಗಿನಕಾಯಿ ಬೆಲೆಯನ್ನು ಕಡಿಮೆ ಮಾಡುವ ಗುರಿ ಸರ್ಕಾರ ಹೊಂದಿದೆ ಎಂದು ತಿಳಿಸಿದ್ದಾರೆ.  ಕೊನೆಗೂ ಅವರು ಬೆಂಬಲಿಗರ ಸಹಾಯದಿಂದ ಕೆಳಗಿಳಿದಿದ್ದಾರೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ