ನನ್ನ ಮರ್ಯಾದೆ ಹೋಗ್ತಿದೆ ಎಂದ ಬಾಲಿವುಡ್ ನಟಿ

ಗುರುವಾರ, 17 ಸೆಪ್ಟಂಬರ್ 2020 (19:38 IST)
ಬಾಲಿವುಡ್ ನಟಿಯೊಬ್ಬರು ತಮ್ಮ ಮರ್ಯಾದೆ ಹೋಗ್ತಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ.


ಡ್ರಗ್ಸ್ ಮಾಫಿಯಾ ಕೇಸ್ ನಲ್ಲಿ ನಟಿ ರಿಯಾ ಚಕ್ರವರ್ತಿ ಈಗಾಗಲೇ ಆರೋಪಿಯಾಗಿದ್ದಾರೆ.

ನಟಿ ರಿಯಾ ವಿಚಾರಣೆ ವೇಳೆ ತನ್ನ ಜೊತೆಗೆ ನಟಿಯರಾದ ರಾಕುಲ್ ಪ್ರೀತ್ ಸಿಂಗ್ ಮತ್ತು ಸಾರಾ ಅಲಿಖಾನ್ ಅವರೂ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂದು ಎನ್ ಸಿ ಬಿ ಅಧಿಕಾರಿಗಳ ಮುಂದೆ ಬಾಯಿ ಬಿಟ್ಟಿದ್ದಾಳೆ ಎನ್ನಲಾಗಿದೆ.

ಹೀಗಾಗಿ ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಹೆಸರು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ಇದೆ.

ಈ ನಡುವೆ ಮಾಧ್ಯಮಗಳಲ್ಲಿ ನನ್ನ ಮರ್ಯಾದೆ ಹೋಗುತ್ತಿದೆ. ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಟಿ ರಾಕುಲ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ