ಪೂರ್ಣಗೊಂಡ ಕರ್ತಾರ್ ಪುರ ಕಾರಿಡಾರ್ ಯೋಜನೆ; ಒಪ್ಪಂದಕ್ಕೆ ಸಹಿ ಹಾಕಿದ ಭಾರತ- ಪಾಕಿಸ್ತಾನ
ಶುಕ್ರವಾರ, 25 ಅಕ್ಟೋಬರ್ 2019 (07:31 IST)
ಲಾಹೋರ್ : ಕರ್ತಾರ್ ಪುರ ಕಾರಿಡಾರ್ ಯೋಜನೆ ಒಪ್ಪಂದಕ್ಕೆ ಉಭಯ ರಾಷ್ಟ್ರಗಳಾದ ಭಾರತ ಹಾಗೂ ಪಾಕಿಸ್ತಾನ ಸಹಿ ಹಾಕಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕರ್ತಾರ್ ಪುರದಲ್ಲಿರುವ ಸಿಖ್ಖರ ಪವಿತ್ರ ಕ್ಷೇತ್ರ ದರ್ಬಾರ್ ಸಾಹಿಬ್ ಗೆ ಕಾರಿಡಾರ್ ಮೂಲಕ ವೀಸಾರಹಿತವಾಗಿ ಭಾರತೀಯರು ಭೇಟಿ ನೀಡಲು ಅವಕಾಶ ನೀಡುವ ಸಲುವಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡ ಉಭಯ ರಾಷ್ಟ್ರಗಳು ಇದೀಗ ಈ ಒಪ್ಪಂದಕ್ಕೆ ಸಹಿ ಹಾಕಿವೆ.
ಇದೀಗ ಈ ಯೋಜನೆಯ ಕಾಮಗಾರಿ ಪೂರ್ಣಗೊಂಡಿದ್ದು, ನವೆಂಬರ್ 12 ಕ್ಕೆ ಗುರು ನಾನಕ್ ಜನ್ಮದಿನವಾದ್ದರಿಂದ ನವೆಂಬರ್ 9 ರಂದು ಈ ಯೋಜನೆ ಲೋಕಾರ್ಪಣೆಗೊಳ್ಳಲಿದೆ. ಅಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಮ್ಮ ದೇಶದ ಕಾರಿಡಾರ್ ನ್ನು ಉದ್ಘಾಟಿಸಲಿದ್ದಾರೆ.