ಅಮೆರಿಕದಲ್ಲಿ ಮುಂದುವರಿದ ಗುಂಡಿನ ದಾಳಿ!3 ಬಲಿ
ಬಂದೂಕುಧಾರಿ ಅಂಗಡಿಯೊಂದರಲ್ಲಿ 21 ಜನರ ಮೇಲೆ ಗುಂಡು ಹಾರಿಸಿದ್ದಾನೆ. ದಾಳಿಯ ನಂತರ ಶೂಟರ್ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಯಕಿಮಾ, ವಾಷಿಂಗ್ಟನ್ ಸುಮಾರು 96,000 ಜನರಿರುವ ನಗರಗಳು. 2023 ರ ಆರಂಭದ ವಾರಗಳಲ್ಲೇ ಬಂಧೂಕು ಹಿಂಸಾಚಾರ ನಡೆಯುತ್ತಿದೆ. ಒಂದರ ಹಿಂದೆ ಒಂದರಂತೆ ಶೂಟೌಟ್ ಪ್ರಕರಣಗಳು ವರದಿಯಾಗುತ್ತಿವೆ.
ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದ ಹಾಫ್ ಮೂನ್ ಬೇ ಪ್ರದೇಶದ ಎರಡು ಸ್ಥಳಗಳಲ್ಲಿ ಗುಂಡಿನ ದಾಳಿ ನಡೆದಿತ್ತು. ಅದಾದ ಕೆಲವೇ ಗಂಟೆಗಳಲ್ಲಿ ಈ ದುರಂತ ಘಟನೆ ನಡೆದಿದೆ.