ಕೊರೋನಾ : ಹರ್ಡ್ ಇಮ್ಯುನಿಟಿ ಅಸಾಧ್ಯ - ತಜ್ಞರ ಎಚ್ಚರಿಕೆ

ಶುಕ್ರವಾರ, 6 ಆಗಸ್ಟ್ 2021 (08:48 IST)
ಲಂಡನ್ (ಆ.06): ಕೋರೋನಾ ವಿರುದ್ಧ ಹರ್ಡ್ ಇಮ್ಯುನಿಟಿ (ಸಮೂಹ ರೋಗ ನಿರೋಧಕ ಶಕ್ತಿ)ಯನ್ನು ಸಾಧಿಸುವುದು ನಮ್ಮ ಜೀವಿತಾವಧಿಯಲ್ಲಿ ಸಾಧ್ಯವಾಗದೇ ಇರಬಹುದು. ಹೀಗಾಗಿ ಹರ್ಡ್ ಇಮ್ಯುನಿಟಿ ಬದಲು ಬ್ರಿಟನ್ ರೀತಿ ಲಸಿಕೆ ಪ್ರಮಾಣವನ್ನು ಹೆಚ್ಚಿಸಿ, ಜನರಿಗೆ ಓಡಾಟಕ್ಕೆ ಮುಕ್ತ ಅವಕಾಶ ಕಲ್ಪಿಸಬೇಕು ಎಂದು ದಕ್ಷಿಣ ಆಫ್ರಿಕಾದ ವಿಟ್ವಾಟರ್ಸ್ರಾಂಡ್ ವಿಶ್ವವಿದ್ಯಾಲಯದ ವೈರಾಣು ತಜ್ಞರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಕೊರೋನಾ ವಿರುದ್ಧ ಹರ್ಡ್ ಇಮ್ಯುನಿಟಿಯನ್ನು ಸಾಧಿಸಿದರೆ ಕೊರೋನಾವನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂಬ ನಂಬಿಕೆ ಇದೆ. ಆದರೆ, ಈ ನಂಬಿಕೆ ತಪ್ಪು, ಕೊರೋನಾ ವೈರಸ್ ರೂಪಾಂತರಗೊಳ್ಳುತ್ತಾ, ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಹೀಗಾಗಿ ಕೊರೋನಾ ವಿರುದ್ಧ ನಮ್ಮ ಜೀವಿತಾವಧಿಯಲ್ಲಿ ಹರ್ಡ್ ಇಮ್ಯುನಿಟಿ ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಲೇಖನವೊಂದರಲ್ಲಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ