ಪ್ರಧಾನಿ ಮೋದಿಗೆ ಹೆದರಿ ಆಗಾಗ ನೆಲೆ ಬದಲಿಸಿದ್ದ ದಾವೂದ್
ಆದರೆ ಇದರ ನಡುವೆಯೇ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಕೇಂದ್ರದ ಜತೆ ದಾವೂದ್ ಒಪ್ಪಂದ ಮಾಡಿಕೊಂಡಿದ್ದಾನೆ ಎಂದು ಬಾಂಬ್ ಸಿಡಿಸಿದ್ದಾರೆ. ಪಾತಕಿ ಭಾರತಕ್ಕೆ ವಾಪಸಾಗುವ ಕುರಿತಂತೆ ಮಾತುಕತೆ ನಡೆಸಿದ್ದಾನೆ ಎಂದು ಅವರು ಹೇಳಿಕೊಂಡಿದ್ದಾರೆ. ಫೇಸ್ ಬುಕ್ ನಲ್ಲಿ ಇಂತಹದ್ದೊಂದು ವಿಚಾರವನ್ನು ಅವರು ಬರೆದುಕೊಂಡಿದ್ದಾರೆ.