ಚಾಮುಂಡಿ ಬೆಟ್ಟಕ್ಕೆ ಜಾತ್ಯತೀತ ಪಟ್ಟಿ ಬೇಡ: ಡಿಕೆಶಿಗೆ ಸಂಸದ ಯದುವೀರ್ ಒಡೆಯರ್‌ ಕೌಂಟರ್‌

Sampriya

ಬುಧವಾರ, 27 ಆಗಸ್ಟ್ 2025 (10:28 IST)
ಮೈಸೂರು: ಚಾಮುಂಡಿ ಬೆಟ್ಟ ಕೇವಲ ಹಿಂದೂ ಧರ್ಮಕ್ಕೆ ಸೇರಿದಲ್ಲ ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಮೈಸೂರು ರಾಜವಂಶಸ್ಥರೂ ಆಗಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೌಂಟರ್‌ ಕೊಟ್ಟಿದ್ದಾರೆ. 

ಡಿ.ಕೆ.‌ಶಿವಕುಮಾರ್ ನೀಡಿರುವ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂಬ ಹೇಳಿಕೆಯು ಬೇಜವಾಬ್ದಾರಿ ಹಾಗೂ ಆಘಾತಕಾರಿಯಾಗಿದೆ. ಈ ದೇವಸ್ಥಾನದ ಮೇಲೆ ಜಾತ್ಯತೀತ ಪಟ್ಟಿಯನ್ನು ಹಾಕುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. 

ಚಾಮುಂಡಿ ಬೆಟ್ಟವು ಭಾರತೀಯ ಧರ್ಮ, ಹಿಂದೂ ಧರ್ಮಕ್ಕೆ ಸೇರಿರುವಂತಹ ಶಕ್ತಿ ಪೀಠ. ಕೋಟ್ಯಂತರ ಮಂದಿ ಚಾಮುಂಡಿ ತಾಯಿಯ ಮೇಲಿನ ನಂಬಿಕೆಯಿಂದ ಬರುತ್ತಾರೆ, ಒಳಿತಾಗಲೆಂದು ಪ್ರಾರ್ಥಿಸುತ್ತಾರೆ. ಅವರ ಹೇಳಿಕೆ ಖಂಡನೀಯವಾದುದು ಕಿಡಿಕಾರಿದರು.

ಕೋಟ್ಯಂತರ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುತ್ತಿರುವ ಬೆಳವಣಿಗೆ ಹಾಗೂ ಹೇಳಿಕೆಗಳ ಕಾರಣದಿಂದಲೇ ನಾನು ಖಂಡನೆ, ವಿರೋಧ ಹಾಗೂ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರವು ಹಿಂದೂ ಧಾರ್ಮಿಕ ಕೇಂದ್ರಗಳ ವಿಷಯದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಧರ್ಮಸ್ಥಳದ ವಿಷಯದಲ್ಲೂ‌ ಅದನ್ನು ನೋಡಬಹುದು. ಎಸ್‌ಐಟಿ ತನಿಖೆ ನಡೆಯುತ್ತಿದ್ದು ದಿನಕ್ಕೊಂದು ಸತ್ಯ ಹೊರಬರುತ್ತಿದೆ. ಅಲ್ಲಿ ಯಾವ ರೀತಿಯ ಬೆಳವಣಿಗೆಗಳು ನಡೆದಿವೆಯೋ ಅದರ ಬಗ್ಗೆಯೂ ಬಹಳ ಪ್ರಶ್ನೆಗಳಿವೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ