ಸಂತ ಪದವಿಗೆ ಕೇರಳದ ಸಿಸ್ಟರ್ ಮಾರಿಯಂ ಥ್ರೆಸಿಯಾ ಹೆಸರು ಘೋಷಣೆ

ಸೋಮವಾರ, 14 ಅಕ್ಟೋಬರ್ 2019 (08:22 IST)
ವ್ಯಾಟಿಕನ್ : ರೋಮ್ ನ ವ್ಯಾಟಿಕನ್ ಸಿಟಿಯಲ್ಲಿ ಭಾನುವಾರ ನಡೆದ ಸಮಾರಂಭವೊಂದರಲ್ಲಿ ಕೇರಳದ ನನ್ ದಿ.ಸಿಸ್ಟರ್ ಮಾರಿಯಂ ಥ್ರೆಸಿಯಾ ಅವರಿಗೆ  ಕ್ಯಾಥೊಲಿಕ್ ‍ಕ್ರಿಶ್ಚಿಯನ್ನರ ಧರ್ಮಗುರು ಪೋಪ್ ಫ್ರಾನ್ಸಿಸ್ ಸಂತ ಪದವಿಯನ್ನು ಘೋಷಿಸಿದ್ದಾರೆ.




ಥ್ರೆಸಿಯಾ ಅವರು ಕ್ರೈಸ್ತ ಸಮುದಾಯ ಮತ್ತು ಮನುಕುಲದ ಒಳಿತಿಗಾಗಿ ಅಮೂಲ್ಯ ಸೇವೆಗಳನ್ನು ನೀಡಿದ್ದರು. ಇವರು ಜೂನ್ 8, 1926ರಲ್ಲಿ ತಮ್ಮ 50 ವರ್ಷ ವಯಸ್ಸಿನಲ್ಲಿ ನಿಧನರಾದರು. ಈ ಪದವಿ ಪಡೆಯುವುದರ ಮೂಲಕ ಇವರು ಸಂತ ಪದವಿ ಪಡೆದ ಕೇರಳದ ನಾಲ್ಕನೇ ವ್ಯಕ್ತಿಯಾಗಿದ್ದಾರೆ.


ಹಾಗೇ ಸಂತ ಪದವಿ ಇವರಿಗೆ ಮಾತ್ರವಲ್ಲದೇ ಇಂಗ್ಲೆಂಡ್ ನ ಕಾರ್ಡಿನಲ್ ಜಾನ್ ಹೆನ್ರಿ ನ್ಯೂಮನ್, ಸ್ವಿಟ್ಜರ್ಲೆಂಡ್ ನ ಲೇವುಮನ್ ಮಾರ್ಗರೇಟ್ ಬೇಸ್, ಬ್ರೆಜಿಲ್ ನ ಸಿಸ್ಟರ್ ಡ್ಯೂಸ್ ಲೋಪ್ಸ್ ಮತ್ತು ಇಟಲಿಯ ಸಿಸ್ಟರ್ ಗ್ಯೂಸೆಪ್ಪೀನಾ ವೆನ್ನಿನಿ ಅವರಿಗೂ ಸಹ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ