ಅರುಣ್ ಜೇಟ್ಲಿ ನಿಧನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಟ್ರೋಲ್ ಆದ ನಟಿ

ಸೋಮವಾರ, 26 ಆಗಸ್ಟ್ 2019 (11:37 IST)
ಮುಂಬೈ : ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ನಿಧನದ ಬಗ್ಗೆ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಇದೀಗ ಬಾಲಿವುಡ್  ನಟಿ ರಾಖಿ ಸಾವಂತ್ ಟ್ರೋಲ್ ಆಗುತ್ತಿದ್ದಾರೆ.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಜೇಟ್ಲಿ ಅವರನ್ನು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಸಂತಾಪ ಸೂಚಿಸಿದ ನಟಿ ರಾಖಿ ಸಾವಂತ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಇದೀಗ ಟ್ರೋಲ್ ಆಗುತ್ತಿದ್ದಾರೆ.


ನಮಸ್ಕಾರ ಸ್ನೇಹಿತರೇ. ಬಿಜೆಪಿ ನಾಯಕ ಜೇಟ್ಲಿ ಈಗ ನಮ್ಮ ನಡುವೆ ಇಲ್ಲ. ನಾನು ಒಂದು ವಾರ ಮೊದಲು ಅಲ್ಲ 10 ದಿನದ ಮೊದಲೇ ಹೇಳಿದ್ದೆ. ನನಗೆ ಕೆಲವು ಬಾರಿ ಈ ರೀತಿಯ ಕನಸುಗಳು ಬರುತ್ತದೆ. ನನಗೆ ಮೊದಲೇ ಈ ವಿಷಯಗಳು ತಿಳಿಯುತ್ತದೆ. ಹೇಗೆ ಎಂದು ಗೊತ್ತಿಲ್ಲ. ಆದರೆ ಇದು ದೇವರ ಶಕ್ತಿ. ಈ ರೀತಿಯ ಶಕ್ತಿ ನೀಡಿದ್ದಕ್ಕೆ ದೇವರಿಗೆ ಧನ್ಯವಾದ ತಿಳಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಲು ಇಷ್ಟಪಡುತ್ತೇನೆ. ಇಡೀ ಭಾರತ ಅವರನ್ನು ನೆನಪಿಸಿಕೊಳ್ಳುತ್ತದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ