ಲಸಿಕೆ ಪಡೆಯದವರಿಂದ 200 ಡಾಲರ್ ಆರೋಗ್ಯ ವೆಚ್ಚ ವಸೂಲಿಗೆ ಮುಂದಾದ ಡೆಲ್ಟಾ ಏರ್ ಲೈನ್ಸ್
ಶುಕ್ರವಾರ, 27 ಆಗಸ್ಟ್ 2021 (15:05 IST)
ನವದೆಹಲಿ : ಕೋವಿಡ್ ಲಸಿಕೆ ಪಡೆಯದ ಉದ್ಯೋಗಿಗಳಿಂದ ಪ್ರತಿ ತಿಂಗಳೂ 200 ಡಾಲರ್ ಆರೋಗ್ಯ ವೆಚ್ಚ ವಸೂಲಿ ಮಾಡಲು ಅಮೆರಿಕಾದ ಡೆಲ್ಟಾ ಏರ್ಲೈನ್ ನಿರ್ಧರಿಸಿದೆ. ಕಂಪೆನಿಯ ಉದ್ಯೋಗಿಗಳು ಲಸಿಕೆ ಪಡೆಯಲು ಸೆಪ್ಟಂಬರ್ 30ರಂದು ಗಡುವು ನೀಡಲಾಗಿದೆ.
ಸೆ.12ರ ನಂತರ ಪ್ರತಿಯೊಬ್ಬ ಉದ್ಯೋಗಿಯನ್ನು ವಾರಕ್ಕೊಮ್ಮೆ ತಪಾಸಣೆ ನಡೆಸಲಾಗುವುದು. ನಿಗದಿತ ಅವಧಿಯಲ್ಲಿ ಲಸಿಕೆ ಪಡೆಯದೇ ಇದ್ದವರಿಗೆ ನವೆಂಬರ್ ತಿಂಗಳಿನಿಂದ ಪ್ರತಿ ತಿಂಗಳು 200 ಡಾಲರ್ ವಸೂಲಿ ಮಾಡಲಾಗುವುದು ಎಂದು ಕಂಪೆನಿ ಹೇಳಿದೆ. ಕಂಪೆನಿಯ ಸಿಇಒ ಎಡ್ ಬಾಸ್ಟೀನ್ ಈ ಬಗ್ಗೆ ಮಾತನಾಡಿ, ಒಂದು ವೇಳೆ ಸೋಂಕು ತಗುಲಿದರೆ ಕನಿಷ್ಟ 50 ಸಾವಿರ ಡಾಲರ್ ಖರ್ಚು ತಗಲಲಿದೆ.