ಬಾಲಕನ ರೂಪದಲ್ಲಿ ಪುನರ್ಜನ್ಮ ಪಡೆದ ಬ್ರಿಟನ್‌ ರಾಜಕುಮಾರಿ ಡಯಾನಾ

ಶುಕ್ರವಾರ, 19 ಜುಲೈ 2019 (06:55 IST)
ಮೆಲ್ಬೋರ್ನ್ : ನಾಲ್ಕು ವರ್ಷದ ಬಾಲಕನೊಬ್ಬ ತಾನು ಬ್ರಿಟನ್‌ನ ರಾಜಕುಮಾರಿ ಡಯಾನಾಳ ಪುನರ್ಜನ್ಮ ಎಂದು ಹೇಳಿಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾನೆ.



ಬಾಲಕನ ತಂದೆ ಡೇವಿಡ್ ಕ್ಯಾಂಪ್ ಬೆಲ್ ಆಸ್ಟ್ರೇಲಿಯಾ ಖ್ಯಾತ ದೂರದರ್ಶನ ವಾಹಿನಿಯೊಂದರಲ್ಲಿ ನಿರೂಪಕನಾಗಿದ್ದು ತನ್ನ ಮಗ ಬಿಲ್ಲಿ ಕ್ಯಾಂಪ್ ಬೆಲ್ ತಾನು ಡಯಾನಾಳ ಪುನರ್ಜನ್ಮ ಎಂದು ಹೇಳುತ್ತಿರುವುದಾಗಿ ತಿಳಿಸಿದ್ದಾನೆ.

 

ಬ್ರಿಟನ್‌ನ ರಾಜಕುಮಾರಿ ಡಯಾನ 1997 ರಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಡಯಾನಾ ಸಾವಿಗೀಡಾಗಿ 18 ವರ್ಷಗಳ ನಂತರ ಮತ್ತೆ ತಾನು ಜನಿಸಿದ ಈ ಬಾಲಕ ಡಯಾನಾರ ಜೀವನದಲ್ಲಿ ನಡೆದ ಯಾವುದೇ ಘಟನೆಯನ್ನು ಸಹ ವಿವರಿಸಬಲ್ಲವನಿದ್ದಾನೆ.ಅಲ್ಲದೆ ಡಯಾನಾ ಮಕ್ಕಳಾದ ವಿಲಿಯಂ ಹಾಗೂ ಹ್ಯಾರಿ ನನ್ನ ಮಕ್ಕಳು ಎನ್ನುತ್ತಾನೆ ಎಂದು ಯುಕೆ ಮಾದ್ಯಮಗಳು ವರದಿ ಮಾಡಿದೆ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ